ಶಹಾಪುರ: ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಭಾಷಾ ಕೆರೆ ಕ್ಷೇತ್ರ ದೇವರ ಕೆರೆ ಎಂದು ಕರೆಯುತ್ತಾರೆ.
ಇಲ್ಲಿ ಪ್ರತಿ ಗುರುವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಇಲ್ಲಿ ಕುರಿ ಬಲಿ ನಡೆಯುತ್ತದೆ. ಉಳಿದ ಆಹಾರ ರಾಶಿಗಟ್ಟಲೇ ಕೆರೆ ಪ್ರದೇಶದಲ್ಲಿ ಬಿಟ್ಟು ಹೋಗುವುದರಿಂದ ಮಾಲಿನ್ಯ ಉಂಟಾಗಿ ಜಾನುವಾರುಗಳು ಇಲ್ಲಿ ಬಿಸಾಕಿದ ಆಹಾರ ಸೇವಿಸಿ ತೊಂದರೆಗೀಡಾಗುತ್ತಿವೆ.
ಅಲ್ಲದೆ ಕರೆ ಪ್ರದೇಶ ಮಾಲಿನ್ಯ ಉಂಟಾಗಿದೆ. ಸಂಬಂಧಿಸಿದ ತಹಶೀಲ್ದಾರರು ಕೂಡಲೇ ಆಹಾರ ಎಸೆಯವುದನ್ನು ತಡೆಯಬೇಕು. ಅಲ್ಲದೆ ಕೆರೆ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೋಲಂಪಲ್ಲಿ ಆಗ್ರಹಿಸಿದ್ದಾರೆ.
ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣ ಇದಾಗಿದೆ. ಪ್ರಸ್ತುತ ದಿನಗಳಲ್ಲಿ ಪ್ರತಿ ಗುರುವಾರ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದು, ಬಲಿ ನೀಡಿದ ಕುರಿಗಳ ಚರ್ಮ ಸಹ ಮನೆಗೆ ತರುವುದಿಲ್ಲ. ಅದನ್ನು ಚೂರಿ ಹಾಕಿದವರು ಚರ್ಮವನ್ನು ತೆಗೆದುಕೊಂಡು ಹೋಗುವುದಿಲ್ಲ. ಕೆರೆಯ ಪ್ರದೇಶದ ಗಿಡಮರಗಳ ಮೇಲೆ ಕುರಿಗಳ ಚರ್ಮವನ್ನು ಜೋತು ಹಾಕಿರುವುದು ಕಾಣಬಹುದು.
ಕುರಿಗಳ ಬಲಿ ಅವುಗಳ ಚರ್ಮ ಇದೇ ಪ್ರದೇಶದಲ್ಲಿ ರಾಶಿಗಟ್ಟಲೇ ತೂಗು ಹಾಕಲಾಗುತ್ತಿದೆ. ಉಳಿದ ಆಹಾರ ಯಾವುದೇ ಸಾಮಗ್ರಿ ಇಲ್ಲಿಂದ ವಾಪಾಸ್ ಮನೆಗೆ ತೆಗೆದುಕೊಂಡು ಹೋಗಬಾರದೆಂಬ ಸಂಪ್ರದಾಯವಿದೆ. ಹೀಗಾಗಿ ಉಳಿದ ಆಹಾರ ಇಲ್ಲಿಯೇ ರಾಶೀಗಟ್ಟಲೇ ಹಾಕಲಾಗುತ್ತಿದೆ. ಇದರಿಂದ ಸುಕ್ಷೇತ್ರ ಕೆರೆ ಪ್ರದೇಶ ತುಂಬಾ ಮಲೀನವಾಗಿದೆ. ಇಲ್ಲಿ ಬಿಸಾಕಿದ ಆಹಾರ ಸೇವಿಸಿ ಸಾಕಷ್ಟು ಜಾನುವಾರುಗಳು ಸಾವನ್ನಪ್ಪುತ್ತಿವೆ ಎನ್ನಲಾಗಿದೆ.
ಚಟ್ನಳ್ಳಿ, ಇಬ್ರಾಹಿಂಪುರ ಗ್ರಾಮದ ಹಲವಾರು ಜಾನುವಾರುಗಳು ಕೆರೆ ಪ್ರದೇಶದಲ್ಲಿ ಬಿಸಾಕಿದ ಆಹಾರ ಸೇವಿಸಿ ಮೃತಪಟ್ಟಿವೆ. ಈ ಕುರಿತು ಚಟ್ನಳ್ಳಿಯ ಪಶು ಚಿಕಿತ್ಸಾ ಕೇಂದ್ರ ಡಾ| ನಾಗರಾಜ ಅವರು ಸ್ಪಷ್ಟ ಪಡಿಸಿದ್ದಾರೆ. ಕಾರಣ ತಾಲೂಕು ಆಡಳಿತ ಕೂಡಲೇ ಕೆರೆ ಪ್ರದೇಶದಲ್ಲಿ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು. ಮಲೀನತೆ ಉಂಟಾಗದಂತೆ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಬರುವ ಭಕ್ತಾದಿಗಳಿಗೂ ಅನುಕೂಲ ಕಲ್ಪಿಸಬೇಕು.
•
ಮಲ್ಲಯ್ಯ ಪೋಲಂಪಲ್ಲಿ,
ಸಾಮಾಜಿಕ ಕಾರ್ಯಕರ್ತ
ಮಲ್ಲಿಕಾರ್ಜುನ ಮುದ್ನೂರ