Advertisement

ಲಾಕ್‌ಡೌನ್‌ ನಿಯಮ ಉಲ್ಲಂಘನೆ: 33 ಸಾವಿರ ರೂ. ದಂಡ ವಸೂಲಿ

12:30 PM May 14, 2020 | Naveen |

ಶಹಾಪುರ: ಕೋವಿಡ್ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಜಾರಿಗೆ ತಂದಿರುವ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಕಾರಣಕ್ಕೆ ನಗರಕ್ಕೆ ಬಟ್ಟೆ ಅಂಗಡಿ ಮಾಲೀಕರಿಗೂ ಹಾಗೂ ಮಾಸ್ಕ್ ಧರಿಸದವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ದಂಡ ವಿಧಿಸಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಶಿವಪೂಜೆ, ಜಿಲ್ಲಾಧಿಕಾರಿಗಳ ಆದೇಶ ಮೀರಿ ತೆರೆದಿದ್ದ ಬಟ್ಟೆ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಿಧಿಸಲಾಗಿದೆ. ಅಲ್ಲದೆ ಸಾರ್ವತ್ರಿಕ ಸ್ಥಳಗಳಲ್ಲಿ ಉಗುಳುತ್ತಿದ್ದ ನಾಗರಿಕರಿಗೂ ದಂಡ ಹಾಕಲಾಗಿದೆ. ಮಾಸ್ಕ್ ಧರಿಸದೆ ಓಡಾಡುತ್ತಿದ್ದ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕುಳಿತಿದ್ದ, ಗುಂಪು ಸೇರಿದ್ದವರ ಮೇಲೂ ಕ್ರಮಕೈಗೊಳ್ಳಲಾಗಿದೆ. ಒಟ್ಟು 33.500 ರೂ. ದಂಡ ಸಂಗ್ರಹವಾಗಿದೆ. ಮುಂಬರುವ ದಿನಗಳಲ್ಲಿ ಇನ್ನು ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾರಣ ನಾಗರಿಕರು, ಆಯಾ ಅಂಗಡಿ ಮಾಲೀಕರು ಸರ್ಕಾರದ ಆದೇಶದಂತೆ ನಿಯಮ ಪಾಲನೆ ಮಾಡಲೇಬೇಕು. ಇಲ್ಲವಾದಲ್ಲಿ ಆಯಾ ಅಂಗಡಿ ಲೈಸನ್ಸ್‌ ರದ್ದು ಪಡಿಸಲಾಗುವದು ಎಂದು ಎಚ್ಚರಿಸಿದರು.

ನಾಗರಿಕರೂ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್‌ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲೂ ಉಗುಳಬಾರದು. ಮುಂಬರುವ ದಿನಗಳಲ್ಲಿ ಹೀಗೆ ಮುಂದುವರಿದಲ್ಲಿ ದಂಡದ ಜತೆಗೆ ಶಿಕ್ಷೆಗೆ ಗುರಿಪಡಿಸಲಾಗುವುದು. ನಾಗರಿಕರು, ವ್ಯಾಪಾರಿಗಳು ಈಗಲೇ ಎಚ್ಚೆತ್ತುಕೊಂಡು ನಡೆಯಬೇಕು ಎಂದು ಸೂಚಿಸಿದರು.

ದಾಳಿ ವೇಳೆ ನಗರಸಭೆ ಇಂಜಿನಿಯರ್‌ ಹರೀಶ ಸಜ್ಜನ, ಪಿಎಸ್‌ಐ ಚಂದ್ರಕಾಂತ ಮೆಕಾಲೆ, ನಗರಸಭೆ ಎಸ್‌ಐ ಹನುಮಂತ ಯಾದವ, ಮೈನುದ್ದೀನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next