Advertisement
ನಗರದ ಹಲವು ಹವಾ ನಿಯಂತ್ರಿತ ಹೋಟೆಲ್ಗಳಲ್ಲಿ ಜನ ತಂಪು ಪಾನೀಯ ಕುಡಿದು ಕಾಲ ಕಳೆಯುತ್ತಿದ್ದಾರೆ. ಹಲವಡೆ ಎಳೆ ನೀರು, ಐಸ್ ಕ್ರೀಮ್ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ದಿನ ಕಳೆದಂತೆ ಬಿಸಿಲಿನ ಕಾವು ಏರುತ್ತಿದೆ. ಬಿಸಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಸದಾ ಜನ ಜಂಗುಳಿಯಿಂದ ಕೂಡಿರುತ್ತಿದ್ದ ನಗರ ಬಿಸಿಲ ತಾಪಕ್ಕೆ ಹೆದರಿದ ಜನ ಹೊರ ಬರುತ್ತಿಲ್ಲ.
ನಗರದ ಪ್ರಮುಖ ರಸ್ತೆ ಹಾಗೂ ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವೃತ್ತಗಳ ಬದಿಯಲ್ಲಿ ಹಸಿರು ಹೊದಿಕೆಯಿಂದ ಸಮರ್ಪಕವಾಗಿ ಟೆಂಟ್ ಹಾಕುವ ಮೂಲಕ ಸಾರ್ವಜನಿಕರಿಗೆ ಬಿಸಿಲಿನಿಂದ ವಿಶ್ರಾಂತಿ ಪಡೆಯಲು ವಿಜಯಪುರ ಮಾದರಿಯಲ್ಲಿ ನಗರದಲ್ಲಿಯೂ ಅಳವಡಿಸಬೇಕು ಎಂದು ಪೌರಾಯುಕ್ತರಲ್ಲಿ ಬಿಜೆಪಿ ಮುಖಂಡ ಗುರು ಕಾಮಾ ಮನವಿ ಮಾಡಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಸುರಪುರ ನಗರಗಳಲ್ಲಿ ಜನರು ಒಂದಿಷ್ಟು ವಿಶ್ರಾಂತಿ ಪಡೆಯಲು ರಸ್ತೆ ಬದಿ ನೆರಳಿನ ಪರದೆ ಅಳವಡಿಸುವ ಕಾರ್ಯ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಬೇಕು. ಕರ್ನಾಟಕದಲ್ಲಿಯೇ ಬಿಸಿಲು ನಾಡು ಎಂದು ಪ್ರಸಿದ್ಧ ಪಡೆದ ಹೈಕ ಪ್ರದೇಶದಲ್ಲಿ ಪ್ರಸ್ತುತ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು, ವಿಜಯಪುರ ಮಾದರಿಯಲ್ಲಿ ನೆರಳಿನ ವ್ಯವಸ್ಥೆ ಮಾಡುವ ಅಗತ್ಯವಿದೆ ಎಂದಿದ್ದಾರೆ.