Advertisement

ನಕಲಿ ಬೀಜ ಮಾರಾಟ ಮಾಡುವವರ ವಿರುದ್ಧ ಕ್ರಮ

04:09 PM Apr 29, 2020 | Naveen |

ಶಹಾಪುರ: ರಾಜ್ಯದಲ್ಲಿ ನಕಲಿ ಬೀಜಗಳ ಹಾವಳಿ ಉಂಟಾಗಿದ್ದು, ಹಲವಡೆ ನಕಲಿ ಬೀಜ ಮಾರಾಟಗಾರರನ್ನು ವಶಕ್ಕೆ ಪಡೆಯಲಾಗಿದೆ. ಅದರಂತೆ ಜಿಲ್ಲೆಯಲ್ಲೂ ನಕಲಿ ಬೀಜಗಳ ಮಾರಾಟ ಜಾಲವಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಗರದ ಕೈಗಾರಿಕಾ ಪ್ರದೇಶದ ಉಷಾ ಕೋಲ್ಡ್‌ ಸ್ಟೋರೇಜ್‌ಗೆ ಭೇಟಿ ಪರಿಶೀಲಿಸಿದ್ದು, ಅಂತಹ ಯಾವುದೇ ಲಕ್ಷಣ ಕಂಡು ಬರಲಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್‌.ದೇವಿಕಾ ತಿಳಿಸಿದರು.

Advertisement

ಇಲ್ಲಿನ ಕೋಲ್ಡ್‌ ಸ್ಟೋರೇಜ್‌ಗೆ ಭೇಟಿ ನೀಡಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊದಲೇ ಪ್ರತಿ ವರ್ಷ ರೈತರು ಒಂದಿಲ್ಲೊಂದು ಸಂಕಷ್ಟ ಎದುರಿಸುವಂತಾಗಿದೆ. ರೈತರಿಗೆ ನಕಲಿ ಬೀಜಗಳ ಮಾರಾಟದಿಂದ ಮೋಸ ಆಗಬಾರದು ಎಂಬ ಉದ್ದೇಶದಿಂದ ನಕಲಿ ಬೀಜಗಳನ್ನು ಸಂಗ್ರಹಿಸುವ ಅಡ್ಡೆಗಳನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ. ಈ ಸ್ಟೋರೇಜ್‌ನಲ್ಲಿ
ಅನುಮಾನ ಬಂದ ಹಿನ್ನೆಲೆ ದಾಳಿ ನಡೆಸಿ ಪರಿಶೀಲಿಸಲಾಯಿತು ಎಂದರು.

ಇಲ್ಲಿ ಸಂಗ್ರಹಿಸಲಾದ ಮೆಣಸಿನಕಾಯಿ ಕೇವಲ ರೈತರದ್ದಾಗಿದೆ. ವರ್ತಕರ ಮತ್ತು ದಲ್ಲಾಳಿಗಳ ಮೆಣಸಿನಕಾಯಿ ಅಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಆದರೆ ಸಂಗ್ರಹಿಸಿದ ರೈತರ ಮಾಹಿತಿ ಲಭ್ಯವಾಗಿಲ್ಲ. ಕೂಡಲೇ ಸಂಗ್ರಹಕಾರರ ಮಾಹಿತಿ ಪಡೆಯುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಗೌತಮ್‌, ಜಾಗೃತ ದಳದ ಅಧಿಕಾರಿ ರೂಪ ಎಂ.ಸಾಹೇಬ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next