Advertisement

ಪುಟ್ಟರಾಜ ಗವಾಯಿ ಸೇವೆ ಅನನ್ಯ

04:37 PM Mar 01, 2020 | Naveen |

ಶಹಾಪುರ: ನಾಡಿನಲ್ಲಿ ಸಂಗೀತ, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ಡಾ| ಪಂಡಿತ ಪುಟ್ಟರಾಜ ಗವಾಯಿ ಸೇವೆ ಅನನ್ಯವಾಗಿದೆ. ಅವರು ಅಂಧರ ಬಾಳಿನ ಬೆಳಕಾಗಿ ವಿಶೇಷಚೇತನರಲ್ಲಿ ಬದುಕಿನ ಚಿಲುಮೆ ಹೊರ ಹೊಮ್ಮಿಸಿದವರಾಗಿದ್ದಾರೆ ಎಂದು ಉಪನ್ಯಾಸಕ ಕ್ಷೀರಲಿಂಗಯ್ಯ ಬೋನ್ಹಾಳ ಹಿರೇಮಠ ತಿಳಿಸಿದರು.

Advertisement

ನಗರದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಸುರಪುರ ವತಿಯಿಂದ ಹಮ್ಮಿಕೊಂಡಿದ್ದ ಪುಟ್ಟರಾಜ ಗವಾಯಿಗಳ ಜನ್ಮದಿನ ನಿಮಿತ್ತ ವಿದ್ಯಾರ್ಥಿಗಳಿಗೆ ಫೈಲ್‌ಗ‌ಳನ್ನು ವಿತರಿಸಿ ಅವರು ಮಾತನಾಡಿದರು.

ಸಂಗೀತ ಕ್ಷೇತ್ರದಲ್ಲಿ ಪಂ. ಪುಟ್ಟರಾಜ ಗವಾಯಿಗಳವರದು ಮೇರು ವ್ಯಕ್ತಿತ್ವ, ಅಪ್ರತಿಮ ಚೇತನಾಶೀಲರಾಗಿದ್ದರು. ಅನಾಥ ಮತ್ತು ಅಂಧ ಮಕ್ಕಳಿಗೆ ಸಂಗೀತ ವಿದ್ಯಾಭ್ಯಾಸ ಮಾಡಿಸುವ ಮೂಲಕ ಅವರ ಬಾಳಲ್ಲಿ ಅಧಮ್ಯ ಚೈತನ್ಯ ತುಂಬಿದ್ದರು. ಇಂದಿಗೂ ಸಹಿತ ಸಾವಿರಾರು ಅಂಧರ ಬಾಳು ಅವರ ಆಶ್ರಮದಲ್ಲಿ ವಿಕಸಿತಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ಡಾ| ಬಸವಲಿಂಗಯ್ಯ ಹಿರೇಮಠ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ನಾರಾಯಣಾಚಾರ್ಯ ಸಗರ, ಮುಖ್ಯ ಗುರು ಉಷಾ ಸಗರ, ಶಿಕ್ಷಕರಾದ ದೀಪಕ ಘಾಳಿ, ಗಿರೀಶ ಪೋದ್ದಾರ, ಶಿವಪುತ್ರಪ್ಪ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next