Advertisement

ಹಳೇ ಬಸ್‌ ನಿಲ್ದಾಣದೊಳಗೆ ಬಸ್‌ ನಿಲುಗಡೆಗೆ ಆದ್ಯತೆ

05:10 PM Nov 02, 2019 | Team Udayavani |

ಶಹಾಪುರ: ತಾತ್ಕಾಲಿಕವಾಗಿ ಇಲ್ಲಿನ ಹಳೇ ಬಸ್‌ ನಿಲ್ದಾಣದ ಆವರಣದೊಳಗೆ ಬಸ್‌ ನಿಲುಗಡೆಗೆ ಸಮ್ಮತಿ ನೀಡಿ, ಶುಕ್ರವಾರ ಬಸ್‌ ನಿಲುಗಡೆಗೆ ಆರಂಭಿಸಿದ್ದಕ್ಕಾಗಿ ಶಹಾಪುರ ನಾಗರಿಕ ಹೋರಾಟ ಒಕ್ಕೂಟ ಸಮಿತಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಹಳೇ ಬಸ್‌ ನಿಲ್ದಾಣ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಬಸ್‌ ಸಂಚಾರ, ನಿಲುಗಡೆಗೆ ಸಾಕಷ್ಟು ತೊಂದರೆ ಯಾಗಿತ್ತು. ನಗರದ ಹೆದ್ದಾರಿ ಮೇಲೆ ಬಸ್‌ ನಿಲುಗಡೆಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಅ.29ರಂದು ನಡೆದ ಬಸ್‌ ಅಪಘಾತದಲ್ಲಿ 5 ವರ್ಷದ ಮಗುವೊಂದು ಮೃತಪಟ್ಟಿದ್ದು, ಮಗುವಿನ ಅಜ್ಜಿ ಸಾವು ನೋವಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. ಈ ಘಟನೆಗೆ ಸಂಬಂ ಧಿಸಿದಂತೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಹಳೇ ಬಸ್‌ ನಿಲ್ದಾಣ ಹತ್ತಿರ ಒಂದೆಡೆ ಆಟೋ ಸ್ಟ್ಯಾಂಡ್ , ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಬಸ್‌ ನಿಲುಗಡೆಗೆ ಸುರಕ್ಷಿತವಾಗಿರಲಲ್ಲಿ. ಈ ಕುರಿತು ಕೂಡಲೇ ಬಸ್‌ ನಿಲ್ದಾಣ ಒಳಾಂಗಣ ಕಾಮಗಾರಿ ಮುಗಿದಿದ್ದು, ಕೂಡಲೇ ಬಸ್‌ಗಳು ನಿಲ್ದಾಣದೊಳಗೆ ತಾತ್ಕಾಲಿಕವಾಗಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಅಪಘಾತ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿತ್ತು.

ನಾಗರಿಕರ ಬೇಡಿಕೆಗೆ ಅಧಿ ಕಾರಿಗಳು ಸ್ಪಂದಿಸಿದ್ದರಿಂದ ಶುಕ್ರವಾರ ಬಸ್‌ಗಳನ್ನು ಹಳೇ ಬಸ್‌ ನಿಲ್ದಾಣದೊಳಗೆ ಪ್ರವೇಶ ಪಡೆಯುತ್ತಿವೆ. ಅಲ್ಲದೆ ಬಸ್‌ ಒಳಗಡೆ ಬಸ್‌ ಸಮರ್ಪಕವಾಗಿ ಒಳ ಪ್ರವೇಶಿಸಲು ನಿಲ್ದಾಣ ಗೇಟ್‌ ಮುಂದೆ ಕಟ್ಟಿದ್ದ ರಸ್ತೆ ವಿಭಜಕ ಗೋಡೆ ಒಡೆದು ಹಾಕಬೇಕು. ಬಾಲಕಿಯರ ಕಾಲೇಜಿಗೆ ತೆರಳುವ ಮಾರ್ಗದಲ್ಲೂ ರಸ್ತೆ ವಿಭಜಕ ಒಡೆಯುವ ಮೂಲಕ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ಸುಗಮ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕ ಹೋರಾಟ ಸಮಿತಿ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next