Advertisement
ನಗರದ ಬಿಲ್ವಂಕೊಂಡಿಮಠದಲ್ಲಿ ನಡೆದ ಸಾಮೂಹಿಕ ವಿವಾಹದ ಕರ ಪತ್ರ ಬಿಡುಗಡೆ ಮಾಡಿ ಸ್ವಾಮೀಜಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಅಗತ್ಯಗಿಂತ ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಖರ್ಚು ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ಬಡವರು ಮಕ್ಕಳ ಮದುವೆಗೆ ಜೀವಮಾನವಿಡಿ ದುಡಿದು ಕೂಡಿಟ್ಟ ಹಣ ಖರ್ಚು ಮಾಡಿದರೂ ಸಾಲ ಅನಿವಾರ್ಯವಾಗಿದೆ. ಇದಕ್ಕೆಲ್ಲ ಸರಳ ಉಚಿತ ಸಾಮೂಹಿಕ ಮದುವೆಯೇ ಮದ್ದು ಎಂದು ಹೇಳಿದರು.
ಬಾಪುಗೌಡರು ಈ ಹಿಂದೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಅವರ ಪುಣ್ಯಸ್ಮರಣೆ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ವಿನಃ ಇಲ್ಲಿ ಯಾವುದೇ ರಾಜಕೀಯ, ಪಕ್ಷ, ಪಂಥ ಎಂಬ ಭಿನವಿಲ್ಲ ಎಂದು ಹೇಳಿದದರು. ಮಡ್ನಾಳ ಗ್ರಾಮದ ಅಲ್ಲಮಪ್ರಭುಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸರಳ ಸಾಮೂಹಿಕ ವಿವಾಹ ಈಗಿನ ಕಾಲದಲ್ಲಿ ಅಗತ್ಯವಿದ್ದು, ಇದೊಂದು ಉತ್ತಮ ಕಾರ್ಯವಾಗಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ. ಕಳೆದ ಎರಡು ಮೂರು ವರ್ಷಗಳಿಂದ ರೈತರು ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿದ್ದಾರೆ. ನೆರೆ ಹಾವಳಿ, ಅತಿವೃಷ್ಠಿ, ಅನಾವೃಷ್ಠಿ ಹೀಗೆ ಸಾಲು ಸಾಲು ಕಷ್ಟಗಳಲ್ಲಿ ಳುಗಿರುವಾಗ ಮನೆಯಲ್ಲಿ ವಯಸ್ಸಿಗೆ ಬಂದ ಮಕ್ಕಳ ಮದುವೆ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಪ್ರತಿ ಗ್ರಾಮಕ್ಕೂ ಈ ಕುರಿತು ಮಾಹಿತಿ ಹೋಗಬೇಕು. ಯಾವುದೇ ಹಿಂದೆ ಮುಂದೆ ನೋಡದೇ ಸಾಮೂಹಿಕ ವಿವಾಹದಲ್ಲಿ ತಮ್ಮ ಮಕ್ಕಳನ್ನು ಮದುವೆಯಾಗಲು ಪ್ರೇರಿಪಿಸಬೇಕು ಎಂದು ಮನವಿ ಮಾಡಿದರು.
Related Articles
Advertisement