ಶಹಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ದಿನಗೂಲಿ ನೌಕರರ ಸಂಘದ ಕಾರ್ಯಕರ್ತರು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಗೃಹ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡ ವಿ.ಜಿ. ಅಂಗಡಿ ಮಾತನಾಡಿ, ಹೊರ ಗುತ್ತಿಗೆ ನೌಕರರಿಗೆ ಕಾನೂನು ಪ್ರಕಾರ ಇಪಿಎಫ್, ಇಎಸ್‌ಐ ಅವರವರ ಖಾತೆಗೆ ಪೂರ್ವಾನ್ವಯವಾಗುವಂತೆ ಉಳಿತಾಯ ಖಾತೆಗೆ ಜಮೆ ಮಾಡಬೇಕು. ಕೆಲಸದಿಂದ
ನಿಲ್ಲಿಸಿದ ಎಲ್ಲ ಇಲಾಖೆ ಗುತ್ತಿಗೆ ದಿನಗೂಲಿ ನೌಕರರನ್ನು ಮರು ನೇಮಕ ಮಾಡಿಕೊಂಡು ಬಾಕಿ ವೇತನ ಪಾವತಿಸಬೇಕು. ಕನಿಷ್ಟ ವೇತನ ಕಾಯ್ದೆ ಪ್ರಕಾರ ಸರ್ಕಾರ ಸೂಚಿಸಿದ ಕನಿಷ್ಟ ವೇತನವನ್ನು ಗುತ್ತಿಗೆ ನೌಕರರಿಗೆ ಪಾವತಿಸಿ ಸಮಾನ ಕೆಲಸಕ್ಕೆ ಸಮಾನ
ವೇತನ ನಿಗ ದಿಗೊಳಿಸಬೇಕು ಎಂದು ಆಗ್ರಹಿಸಿದರು.
ದಿನಗೂಲಿ ನೌಕರರಿಗೆ ನಿವೃತ್ತಿಯಾದ ನಿಯಮದಡಿಯಲ್ಲಿಯೇ ಕೆಲವು ಅಂತರ್ಗತ ತಾರತಮ್ಯ ನಿವಾರಿಸಬೇಕು. ನೌಕರರ ಶಾಸನ ಬದ್ಧ ಸಂವಿಧಾನದ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವ ಕುರಿತಂತೆ ಶಾಸಕರು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು ಎಂದು ಶಾಸಕರಿಗೆ ಒತ್ತಾಯಿಸಿದರು.
ಶಾಸಕರ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮನವಿ ಪತ್ರ ಸ್ವೀಕರಿಸಿದರು. ಕಾಂಗ್ರೆಸ್ ಮುಖಂಡರಾದ ಶಿವಮಹಾಂತ ಚಂದಾಪುರ, ಬಸವರಾಜ ಹೇರುಂಡಿ, ರಾಯಪ್ಪ ಬಾರಿಗಿಡದ ಹಾಗೂ ಇನ್ನಿತರರು ಇದ್ದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಬಸವರಾಜ ಕೋರಿ, ರಾಮು ಪ್ರತಿನಿದಿ, ಮಾನಪ್ಪ ಶಹಾಪುರಕರ್, ಮಲ್ಲಿನಾಥಗೌಡ ದೋರನಹಳ್ಳಿ, ಮಾನಪ್ಪಗೌಡ ಕಮತ್ ರೆಡ್ಡಿ, ಶರಣಯ್ಯಸ್ವಾಮಿ ಹಿರೇಮಠ, ಮುಕು¤ಮ್ ಪಟೇಲ್ ಕೆಂಭಾವಿ, ದೇವಕ್ಕೆಮ್ಮ ಕೆಂಭಾವಿ, ನೀಲಮ್ಮ ಹುಣಸಗಿ, ಬಸಪ್ಪ, ಜೆಜಮ್ಮ ನಾಯ್ಕಲ್, ಶರಣಪ್ಪಗೌಡ, ವೆಂಕಟೇಶ ಹುಣಸಗಿ, ವಿಜಯಕುಮಾರ ಎದುರುಮನಿ, ದೇವರಾಜ ಪಿ. ಗುತ್ತಿಪೇಟ,
ಬಸವರಾಜ ಪೂಜಾರಿ, ಶೇಖಪ್ಪ ಗುತ್ತಿಪೇಟ, ವೆಂಕಟೇಶ ಹುಣಸಗಿ, ಈರಮ್ಮ ಕೆಂಭಾವಿ,
ಗುರುಸ್ವಾಮಿ ಹಿರೇಮಠ, ಮಲ್ಲಮ್ಮ ಐಕೂರು, ದುರಗಮ್ಮ, ಶಂಕ್ರಮ್ಮ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.