Advertisement
ಬೆನಕನಹಳ್ಳಿ ರೈಲ್ವೆ ಕಾಮಗಾರಿ ಪಕ್ಕದಲ್ಲಿ ಹರಿದು ಹೋದ ಹಳ್ಳಕ್ಕೆ ಕೊಂಡಿರುವ ಸರ್ವೇ ನಂಬರ್119ರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಪರಿಶೀಲಿಸಿದರು. ಹತ್ತಿ ಹೊಲದ ಮಧ್ಯೆ ಹಾಕಲಾಗಿದ್ದ ಗಾಂಜಾ ಬೆಳೆ ವಶಕ್ಕೆ ಪಡೆದುಕೊಂಡಿದ್ದು, ಹಸಿ ಗಾಂಜಾ 2. 10 ಲಕ್ಷ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.
Related Articles
Advertisement
ಹೆಚ್ಚಿನ ಲಾಭಕ್ಕಾಗಿ ತಮ್ಮ ಸ್ವಂತ ಹೊಲಗಳಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಹೊಲದ ಮಾಲೀಕರು ಮತ್ತು ಜಮೀನು ಪಾಲಿಗೆ ಮಾಡಿದ ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಾಗವಾನ್ ಮತ್ತು ಡಿವೈಎಸ್‌ಪಿ ಶಿವನಗೌಡ ಮಾರ್ಗದರ್ಶನದಲ್ಲಿ ಸಿಪಿಐ ಹನುಮರಡ್ಡೆಪ್ಪ ನೇತೃತ್ವದಲ್ಲಿ ತಾಲೂಕು ದಂಡಾ ಧಿಕಾರಿ ಜಗನಾಥರಡ್ಡಿ, ಪಿಎಸ್‌ಐ ಎಂ.ಎ. ಚಂದ್ರಕಾಂತ ಹಾಗೂ ಪರಿಕ್ಷಾರ್ಥದ ಪಿಎಸ್‌ಐಗಳಾದ ಹನುಮಂತಪ್ಪ, ಚಂದ್ರಶೇಖರ, ಎಚ್‌ಸಿಗಳಾದ ಮಲ್ಲಣ್ಣ, ಹೊನ್ನಪ್ಪ, ಶರಣಪ್ಪ ಮತ್ತು ಪಿಸಿಗಳಾದ ವೆಂಕಟೇಶ, ಗೋಕುಲ ಹುಸೇನಿ, ಭಾಗಣ್ಣ, ಭೀಮನಗೌಡ, ವೀರೇಶ, ನಾಗರಡ್ಡಿ ದಾಳಿಯಲ್ಲಿ ಭಾಗವಹಿಸಿದ್ದರು.