Advertisement

ಬಲಭೀಮೇಶ್ವರ ದೇಗುಲಕ್ಕೆ ಮೊದಲ ಬಾರಿಗೆ ಬೀಗ

12:47 PM Mar 25, 2020 | Naveen |

ಶಹಾಪುರ: ಸಗರ ನಾಡಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ತಾಲೂಕಿನ ಬಲಭೀಮೇಶ್ವರ ದೇವಸ್ಥಾನ ಸೇರಿದಂತೆ ದಿಗ್ಗಿ ಸಂಗಮೇಶ್ವರ ಮತ್ತು ನಗರದ ಚರಬಸವೇಶ್ವರ ದೇವಸ್ಥಾನಗಳಲ್ಲಿ ಇದೇ ಮೊದಲ ಬಾರಿಗೆ ಧಾರ್ಮಿಕ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವಗಳನ್ನು ರದ್ದುಗೊಳಿಸಲಾಗಿದೆ.

Advertisement

ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ನೀಡಿದ ಸೂಚನೆ ಮೇರೆಗೆ ದೇವಾಲಯಗಳಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬಲಭೀಮೇಶ್ವರ ದೇವಾಲಯದಲ್ಲಿ ಮಂಗಳವಾರ ಪಲ್ಲಕ್ಕಿ ಉತ್ಸವ ನಡೆಯಬೇಕಿತ್ತು.

ಇದೇ ಮೊದಲ ಬಾರಿಗೆ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿದೆ. ಕೊರೊನಾ ಭೀತಿ ನಡುವೆಯೂ ಭಕ್ತರು ಬಲಭೀಮೇಶ್ವರರ ಬಾಗಿಲ ಬಳಿಯೇ ಕಾಯಿ ಹೊಡೆದು ಭಕ್ತಿ ಸಮರ್ಪಣೆ ಮಾಡಿದರು.

ಉಳಿದಂತೆ ಯುಗಾದಿ ಹಬ್ಬದ ನೈವೇದ್ಯ, ಹೂ ಹಣ್ಣು ಕಾಯಿ ಸಮರ್ಪಣೆಗೆ ಕೊರೊನಾ ಕರಿ ನೆರಳು ಆವರಿಸಿದೆ. ಈ ಬಾರಿ ಯುಗಾದಿ ಬೇವು ಕುಡಿಯುವ ಹಬ್ಬ ಸಮರ್ಪಕವಾಗಿ ಯಾರೊಬ್ಬರು ಆಚರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next