Advertisement
ಅಂಚೆ ಕಚೇರಿಯಲ್ಲಿ ಹಣ ನೀಡಬೇಕಾದ ಸಿಬ್ಬಂದಿಯೊಬ್ಬರು ತಮಗೆ ಮನಸ್ಸಿಗೆ ಬಂದ ಸ್ಥಳದಲ್ಲಿ ಕರೆದು ಸತಾಯಿಸುತ್ತಿದ್ದಾರೆಂದು ಫಲಾನುಭವಿಗಳು ಆರೋಪಿಸಿದರು. ಪ್ರತಿ ತಿಂಗಳು ಮಾಸಾಶನ ಪಡೆಯಬೇಕಾದರೆ 100 ರೂ. ಕೊಡಬೇಕು. ಕೊಡದಿದ್ದರೆ ನಮ್ಮ ಮಾಸಾಶನ ಬಂದಿಲ್ಲ ಎಂದು ಸತಾಯಿಸುತ್ತಾರೆ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು. ಅಂಚೆ ಕಚೇರಿ ಸಿಬ್ಬಂದಿ ಕರ್ತವ್ಯ ಮರೆತು ದೇವಸ್ಥಾನ ಮುಂಭಾಗ ಅಥವಾ ಯಾವುದೋ ಗಿಡದ ಕೆಳಗೆ ಕರೆದು ಹಣ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಾಸಾಶನ ಪಡೆಯುವವರು ತಿಂಗಳಲ್ಲಿ ಒಂದು ದಿನ ಪೋಸ್ಟ್‌ಮ್ಯಾನ್‌ಗೆ ಕಾಯುವ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಅಂಚೆ ವ್ಯವಸ್ಥಾಪಕರು ಅಂಚೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ ರಾಜನ್ ಆಗ್ರಹಿಸಿದರು.
•ವಾಣಿ ಕುಲಕರ್ಣಿ,
ಪೋಸ್ಟ್ ಮಾಸ್ಟರ್, ಶಹಾಬಾದ