Advertisement

ಹದಗೆಟ್ಟ ಸಮುದಾಯ ಆರೋಗ್ಯ ಕೇಂದ್ರ

08:24 AM Jan 26, 2019 | Team Udayavani |

ಶಹಾಬಾದ: ಗಬ್ಬು ನಾರುವ ವಾತಾವರಣ, ಎಲ್ಲಿ ನೋಡಿದಲ್ಲಿ ಗುಟಕಾ ಕಲೆ, ಮನಸ್ಸಿಗೆ ಬಂದಾಗ ಬರುವ ಸಿಬ್ಬಂದಿ ಇವೆಲ್ಲವನ್ನು ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಇವೆಲ್ಲವನ್ನು ಕಂಡ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಕಾಂಗ್ರೆಸ್‌ ಮುಖಂಡ ವಿಜಯಕುಮಾರ ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಳೆದ 18 ವರ್ಷಗಳಿಂದ ಈ ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಪಿ.ಎಂ. ಸಜ್ಜನ್‌ ಇದರ ಉಸ್ತುವಾರಿ. ಆಸ್ಪತ್ರೆಯ ಈ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶರಣಗೌಡ ಪಾಟೀಲ ಹಾಗೂ ವಿಜಯಕುಮಾರ ರಾಮಕೃಷ್ಣ ಇದೆನಾ ನೀವು ಮಾಡುವ ಕೆಲಸದ ವೈಖರಿ ಎಂದು ಪ್ರಶ್ನಿಸಿದರು.

ಸಿಬ್ಬಂದಿ ಮೇಲೆ ಹಿಡಿತವಿಲ್ಲ. ಪಾರ್ಮಾಸಿಸ್ಟ್‌ ಯಾರು ಎಂದು ಕೇಳಿದ್ದಕ್ಕೆ ಡೆಪ್ಟೇಶನ್‌ ಮೇಲೆ ಹೋಗಿದ್ದಾರೆ ಎನ್ನುತ್ತಿರಿ. ಇನ್ನೊಬ್ಬರು ರಜೆ ಮೇಲೆ ಹೋಗಿದ್ದಾರೆ ಎರಡು ದಿನದ ಮೇಲೆ ಬಂದಿದ್ದಾರೆ ಎನ್ನುತ್ತಿರಿ. ಯಾಕೆ ಎಂದು ಕೇಳಿದರೆ ಡಿಎಚ್ಒ ಆದೇಶದ ಪ್ರಕಾರ ನಡೆದುಕೊಂಡಿದ್ದೇನೆ ಎನ್ನುತ್ತಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ನಗರಸಭೆ ಸದಸ್ಯ ಶಿವರಾಜ ಕೋರೆ ಅವರು ಎರಡು ದಿನಗಳ ಹಿಂದಷ್ಟೇ ಚುನ್ನಾಭಟ್ಟಿ ಪ್ರದೇಶದ ಶರಣಪ್ಪ ಎನ್ನುವರನ್ನು ಆಸ್ಪತ್ರೆಗೆ ತಂದಾಗ ವೈದ್ಯರೇ ಇರಲಿಲ್ಲ. ಕರೆ ಮಾಡಿದರೂ ಒಬ್ಬರೂ ಬರಲಿಲ್ಲ. ಇದರಿಂದ ಜೀವ ಹೋಯಿತು. ಇದಕ್ಕೆ ಯಾರು ಹೊಣೆ? ವೈದ್ಯಾಧಿಕಾರಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ. ಹೊರಗೆ ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿದರು. ಸ್ಟಾಕ್‌ ರಿಜಿಸ್ಟರ್‌ ನೀಡುವಂತೆ ಕೇಳಿದಾಗ ವೈದ್ಯಾಧಿಕಾರಿಗಳು ನಿರುತ್ತರವಾಗಿದ್ದರು. ನಂತರ ಶರಣಗೌಡ ಪಾಟೀಲ ಅವರು ಆಸ್ಪತ್ರೆಯಲ್ಲಿ ಒಂದು ಸುತ್ತು ಹಾಕಿದರು. ಆಗ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಕ್ಕೆ ಶೌಚಾಲಯದ ನಳಕ್ಕೆ ಸಂಪರ್ಕ ನೀಡಿದ್ದನ್ನು ಕಂಡು ಚಕಿತರಾದರು. ಇದನ್ನು ನೋಡಿದರೆ ನಿಮಗೆ ನಾಚಿಕೆ ಬರುವುದಿಲ್ಲವೇ? ಇದೇ ನೀರು ರೋಗಿಗಳಿಗೆ ಕುಡಿಸಿದರೆ ಏನು ಗತಿ ಎಂದು ಪ್ರಶ್ನಿಸಿದರು. ಅಲ್ಲದೇ ಇನ್ನೊಂದು ಕುಡಿಯುವ ನೀರಿನ ಶುದ್ಧೀಕರಣ ಘಟಕ ಎರಡು ವರ್ಷದಿಂದ ಧೂಳು ಹಿಡಿದುಬಿದ್ದಿದ್ದನ್ನು ಗಮನಿಸಿ ಕೆಂಡಾಮಂಡಲವಾದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ ಮರ್ಚಂಟ್, ನಗರಸಭೆ ಸದಸ್ಯರಾದ ಸೂರ್ಯಕಾಂತ ಕೋಬಾಳ, ಡಾ| ಅಹ್ಮದ್‌ ಪಟೇಲ, ಇನಾಯತ್‌ಖಾನ್‌ ಜಮಾದಾರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಬಸಪ್ಪ ಪಗಲಾಪುರ, ನಗರಸಭೆ ಮಾಜಿ ಸದಸ್ಯರಾದ ಅನ್ವರ್‌ ಪಾಶಾ, ಶಿವರಾಜ ಕೋರೆ, ಸಯ್ಯದ್‌ ಜಹೀರ, ಡಾ| ಆಂಜನೇಯ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next