Advertisement

ಸಾಮಗ್ರಿ ವಿತರಣೆ: ಸಾಮಾಜಿಕ ಅಂತರ ಮಾಯ

12:15 PM May 30, 2020 | Naveen |

ಶಹಾಬಾದ: ತಾಲೂಕಿನ ಗೋಳಾ (ಕೆ) ಗ್ರಾಮದಲ್ಲಿ ಸಾಮಾಜಿಕ ಅಂತರವಿಲ್ಲದೇ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹಾಗೂ ತಾಲೂಕಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿಯೇ ಶುಕ್ರವಾರ ಬಡವರಿಗೆ ಆಹಾರ ಸಾಮಗ್ರಿ ವಿತರಣೆ ಮಾಡಿದರು.

Advertisement

ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಬಡ ಜನರಿಗೆ ಆಹಾರ ಸಾಮಗ್ರಿಗಳನ್ನು ಟ್ರಕ್‌ ಮೂಲಕ ತಂದು ಹಂಚಲಾಯಿತು. ಶಾಸಕರು ಬರುವುದಕ್ಕಿಂತ ಮುಂಚೆ ಗೋಳಾ (ಕೆ) ಗ್ರಾಮದ ಬಡ ಮಹಿಳೆಯರನ್ನು ಗ್ರಾಮದ ಶಾಲೆಯೊಂದರಲ್ಲಿ ಸಾಮಾಜಿಕ ಅಂತರವಿಲ್ಲದೇ ಕೂಡಿಸಲಾಗಿತ್ತು. ಸರ್ಕಾರದ ಆದೇಶ ಗಾಳಿಗೆ ತೂರಿದರೂ ಸ್ಥಳದಲ್ಲಿಯೇ ಬಿಡಾರ ಹೂಡಿದ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿದ್ದರು.

ಶಾಸಕರು ಆಹಾರ ಸಾಮಗ್ರಿಗಳನ್ನು ಹಂಚಲು ಪ್ರಾರಂಭಿಸುತ್ತಿದ್ದಂತೆ ಫಲಾನುಭವಿಗಳಿಗಿಂತ ಬಿಜೆಪಿ ಕಾರ್ಯಕರ್ತರೇ ಕಾಣುತ್ತಿದ್ದರು. ಆಹಾರ ಪೊಟ್ಟಣಕ್ಕಾಗಿ ಮುಗಿಬೀಳುತ್ತಿದ್ದರೂ ಯಾರೂ ಏನು ಮಾಡಲಿಲ್ಲ. ಕೆಲವರು ಮಾಸ್ಕ್ ಧರಿಸಿದರೆ ಬಹುತೇಕರು ಮಾಸ್ಕ್ ಧರಿಸದೇ ಇದ್ದುದಕ್ಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು. ಶಾಸಕರ ಮುಂದೆಯೇ ಇಷ್ಟೆಲ್ಲ ಬೆಳವಣಿಗೆ ನಡೆದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ತೋರಿದರು.

ತಹಶೀಲ್ದಾರ್‌ ಸುರೇಶ ವರ್ಮಾ, ಕೋವಿಡ್‌-19 ನೋಡಲ್‌ ಅಧಿಕಾರಿ ನೀಲಗಂಗಮ್ಮ ಬಬಲಾದ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ತೊನಸನಹಳ್ಳಿ (ಎಸ್‌) ಗ್ರಾ.ಪಂ ಅಧ್ಯಕ್ಷ ವಿಜಯಾನಂದ ಮಾಣಿಕ್‌, ಶಾಂತಕುಮಾರ ಮಾಣಿಕ್‌, ಮರಲಿಂಗ ಗಂಗಭೋ, ರವಿ ಸಣತಮ್‌, ಶಿವಕುಮಾರ ನಾಯ್ಕಲ್‌, ಗ್ರಾ.ಪಂ ಸದಸ್ಯೆ ರಾಜೇಶ್ವರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next