ಶಹಾಬಾದ: ನಿತ್ಯ ಲಿಂಗಪೂಜೆ, ಹಣೆ ಮೇಲೆ ವಿಭೂತಿ ಧಾರಣೆ ಮಾಡುವುದು ವೀರಶೈವ-ಲಿಂಗಾಯತರ ಪದ್ಧತಿ. ಮನೆಯಲ್ಲಿ ನಮ್ಮ ಧರ್ಮದ ಸಂಸ್ಕೃತಿ ಉಳಿಸಿಕೊಳ್ಳಲು ಎಲ್ಲರೂ ಪಾಲನೆ ಮಾಡಬೇಕು. ಆಗ ಧರ್ಮ ಉಳಿಯಲು ಸಾಧ್ಯ. ಅಲ್ಲದೇ ಧರ್ಮದ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದಿವ್ಯಾ ಹಾಗರಗಿ ಹೇಳಿದರು.
ಸಮೀಪದ ತೊನಸನಳ್ಳಿ (ಎಸ್) ಗ್ರಾಮದ ಸಂಗಮೇಶ್ವರ 4ನೇ ಜಾತ್ರಾ ಮಹೋತ್ಸವ, ಪೀಠಾಧಿಪತಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ 11ನೇ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ನೀಡಿದ ‘ವೀರಶೈವ ಧರ್ಮ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ವೀರಶೈವ ಹಾಗೂ ಲಿಂಗಾಯತ ಎನ್ನುವುದು ಬೇರೆ-ಬೇರೆ ಅಲ್ಲ. ಇವರೆಡು ಒಂದೇ. ವೀರಶೈವ ಲಿಂಗಾಯತ ಧರ್ಮ ವಿಭಜನೆ ವಿರುದ್ಧ ನಿರಂತರ ಹೋರಾಟ ನಡೆಸಲಾಗಿದೆ. ಹೋರಾಟ ಹತ್ತಿಕ್ಕಲು ಗೃಹ ಸಚಿವ ಎಂ.ಬಿ. ಪಾಟೀಲ ಷಡ್ಯಂತ್ರ ರೂಪಿಸಿ ಐವರ ಮೇಲೆ ಎಫ್‌ಆರ್‌ಐ ಮಾಡಿಸಿ ಜೈಲಿಗೆ ಹಾಕಿದ್ದಾರೆ. ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ. ಧರ್ಮಕ್ಕಾಗಿ 3×6 ಅಡಿ ಜಾಗಕ್ಕೆ ಹೋಗುವ ವರೆಗೂ ನಿರಂತರ ಹೋರಾಟ ಮಾಡುತ್ತೇವೆ ಎಂದರು.
ನಮ್ಮ ಧರ್ಮ ಒಡೆಯುವ ಎಂ.ಬಿ. ಪಾಟೀಲ ಅವರಂತ ಎಷ್ಟೇ ಜನ ಹುಟ್ಟಿದರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ . ವೀರಶೈವ ಲಿಂಗಾಯತ ಧರ್ಮದ ಹೋರಾಟದ ಫಲವಾಗಿ ಸಂಗಮೇಶ್ವರ ಮಠದಿಂದ ನನಗೆ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ನನ್ನ ಹೋರಾಟಕ್ಕೆ ಹೆಚ್ಚಿನ ಬಲ ತುಂಬಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಜಯಶ್ರೀ ಬಸವರಾಜ ಮತ್ತಿಮಡು, ಬಬಲಾದ ರೇವಣಸಿದ್ಧ ಶಿವಾಚಾರ್ಯರು, ವೆಂಕಟಬೇನೂರನ ಸಿದ್ಧರೇಣುಕ ಶಿವಾಚಾರ್ಯರು, ಕೊಟ್ಟೂರೇಶ್ವರ ಶರಣರು, ಹುಟಗಿಯ ಚಿದಾನಂದ ಶಾಸ್ತ್ರೀ, ಶಾಂತಾದೇವಿ ಪಾಟೀಲ, ಮಹಾಂತೇಶ ಶಾಸ್ತ್ರೀ, ವೀರಯ್ಯ ಶಾಸ್ತ್ರೀ, ಮುದ್ದುಗೌಡ ದರ್ಶನಾಪುರ ಹಾಜರಿದ್ದರು. ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹಾಸ್ಯ ಕಾರ್ಯಕ್ರಮ, ಜ್ಯೂ. ವಿಷ್ಣುವರ್ಧನ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಮಹಾದೇವಪ್ಪ ಬಂದಳ್ಳಿ, ಶರಬಗೌಡ ರಾಮಶೆಟ್ಟಿ, ಶಿವಶಂಕರಪ್ಪ ಮೆಡಗುದ್ಲಿ, ವೀರೇಶ ರಾಮಶೆಟ್ಟಿ, ಸಂಗನಗೌಡ ರಾಮಶೆಟ್ಟಿ, ರೇವಣಸಿದ್ದಪ್ಪ ರಾಮಶೆಟ್ಟಿ, ಅನೀಲ ಮರಗೋಳ, ಮಲ್ಲಣ್ಣ ಗೊಳೇದ, ಶಿವಲಿಂಗಪ್ಪ ಗೊಳೇದ, ಶ್ರೀಮಂತ ಇಂಗಿನ್, ಶಿವಲಿಂಗಪ್ಪ ಮುದಿಗೌಡ, ಮಲ್ಲಿಕಾರ್ಜುನ ಬಂಗಾರಶೆಟ್ಟಿ, ಅಯ್ಯಣ್ಣ ಬಂದಳ್ಳಿ, ಪ್ರದೀಪ ಗೊಳೇದ, ಭೀಮಣ್ಣ ಖಂಡ್ರೆ, ನಾಗರಾಜ ಮೇಲಗಿರಿ, ಸಿದ್ಧು ಮುದಿಗೌಡ, ಮಲ್ಲಿಕಾರ್ಜುನ ರಾಮಶೆಟ್ಟಿ, ನಿಂಗಣ್ಣಗೌಡ ಮಾಲಿ ಪಾಟೀಲ, ಶಿವಲಿಂಗಪ್ಪ ಗೊಳೇದ, ಮಲ್ಲಿಕಾರ್ಜುನ ಗೊಳೇದ, ರೇವಣಸಿದ್ಧಪ್ಪ ಗೊಳೇದ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.