Advertisement

ಕ್ವಾರಂಟೈನ್‌ದಿಂದ ಮನೆಗೆ ಹೋದವರಿಗೆ ಸೋಂಕು

12:14 PM May 30, 2020 | Naveen |

ಶಹಾಬಾದ: ನಗರದ ವಿವಿಧ ಕ್ವಾರಂಟೈನ್‌ ಕೇಂದ್ರದಿಂದ ಗುರುವಾರ ಮನೆಗೆ ತೆರಳಿದ್ದ ಸುಮಾರು ಏಳು ಜನರಿಗೆ ಶುಕ್ರವಾರ ಕೋವಿಡ್ ಸೋಂಕು ಪತ್ತೆಯಾಗಿದೆ.

Advertisement

ನಗರದ ಜಿಪಿಎಸ್‌ ಶಾಲೆಯ ಕ್ವಾರಂಟೈನ್‌ ಕೇಂದ್ರದಿಂದ ಗುರುವಾರ ಮನೆಗೆ ಹೋಗಿದ್ದ ನಾಲ್ವರಿಗೆ ಹಾಗೂ ಭಂಕೂರ ವಸತಿ ನಿಲಯದಲ್ಲಿದ್ದ ಮೂವರಿಗೆ ಸೋಂಕು ಕಂಡು ಬಂದಿದೆ. ನಗರ ಜಿಪಿಎಸ್‌ ಶಾಲೆಯಲ್ಲಿ 69 ಜನ ಮುಂಬೈ ವಲಸಿಗರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಅದರಲ್ಲಿ ಗುರುವಾರ ಓರ್ವ ಮಹಿಳೆಗೆ ಸೋಂಕು ಕಂಡು ಬಂದಿತ್ತು. ಅವಳನ್ನು ಕಲಬುರಗಿಗೆ ಸಾಗಿಸಿ, ಉಳಿದವರನ್ನು ಕ್ವಾರಂಟೈನ್‌ ಕೇಂದ್ರದಿಂದ ಮನೆಗೆ ಕಳುಹಿಸಲಾಗಿತ್ತು. ಹೀಗೆ ಕಳುಹಿಸಿದ ಮೂವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರನ್ನು ಶುಕ್ರವಾರ ಅಂಬುಲೆನ್ಸ್‌ ಮೂಲಕ ಕಲಬುರಗಿಗೆ ಕಳುಹಿಸಲಾಗಿದೆ.

ನಗರದ ಜಿಪಿಎಸ್‌ ಶಾಲೆಯಲ್ಲಿ ಸೋಂಕು ಕಂಡು ಬಂದ ವ್ಯಕ್ತಿಯೊಬ್ಬ ಗುರುವಾರ ಗೋಳಾ (ಕೆ) ಗ್ರಾಮದ ಮನೆಯಲ್ಲಿದ್ದು, ಶುಕ್ರವಾರ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿದ್ದಾನೆ ಎನ್ನಲಾಗಿದೆ. ಆತನ ಕುಟುಂಬಸ್ಥರು ಶುಕ್ರವಾರ ಗೋಳಾ ಶಾಲೆ ಆವರಣದಲ್ಲಿ ಶಾಸಕರು ನೀಡಿದ ದಿನಸಿ ಕಿಟ್‌ ಪಡೆಯಲು ಜನರ ಮಧ್ಯೆ ಇದ್ದರು ಎನ್ನಲಾಗಿದೆ.

ಭಂಕೂರನಲ್ಲಿ ಕೋವಿಡ್ ಸೊಂಕು ಕಂಡು ಬಂದ ವ್ಯಕ್ತಿಗಳು ಕ್ವಾರಂಟೈನ್‌ ಕೇಂದ್ರದ ಸಮೀಪದಲ್ಲಿಯೇ ತಮ್ಮ ಮನೆ ಇರುವುದರಿಂದ ಇದ್ದ 14 ದಿನ ತಮ್ಮ ಮನೆಗೆ ಹೋಗಿ, ಮನೆಯವರೊಂದಿಗೆ ಬೆರೆತಿದ್ದು, ಅವರಲ್ಲಿ ಓರ್ವ ವ್ಯಕ್ತಿ ಕ್ರೂಸರ್‌ನಲ್ಲಿ ಕಲಬುರಗಿಗೆ ಹೋಗಿದ್ದಾನೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next