Advertisement

ಜ್ಞಾನಕ್ಕಿಂತ ಮಿಗಿಲಾದ ಶಕ್ತಿಯಿಲ್ಲ: ಕಟ್ಟಿ

03:02 PM Jun 03, 2019 | Naveen |

ಶಹಾಬಾದ: ವ್ಯಕ್ತಿ ಗುಡಿಸಿಲಿನಲ್ಲಿ ಹುಟ್ಟಿದರೂ, ಅರಮನೆಯಲ್ಲಿ ಮೆರೆಸುವ ಶಕ್ತಿ ಜ್ಞಾನಕ್ಕಿದೆ. ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಮತ್ತೂಂದಿಲ್ಲ ಎಂದು ಸಾಮಾಜಿಕ ಚಿಂತಕ ಲೋಹಿತ್‌ ಕಟ್ಟಿ ಹೇಳಿದರು.

Advertisement

ನಗರದ ನಾಗಮ್ಮ ಚೆನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಉಚಿತ ನೋಟ್ ಬುಕ್‌ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮಕ್ಕಳು ಬಡತನ ಸಮಸ್ಯೆಯಿದೆ ಎಂದು ಕುಗ್ಗದೇ, ಕೀಳರಿಮೆ ತೊಲಗಿಸಿ, ಕಲಿಯುವ ಉತ್ಸಾಹ, ಸಾಧನೆ, ಛಲ ತೋರಿದರೆ ಬದುಕಿನಲ್ಲಿ ಎಲ್ಲವನ್ನು ಸಾಧಿಸಬಹುದು. ಇಲ್ಲಗಳ ಮಧ್ಯೆಯೇ ಸಾಧಿಸುವುದು ಮುಖ್ಯ. ಕೀಳರಿಮೆಯಿಂದ ಹೊರಬನ್ನಿ. ಹವ್ಯಾಸ ಬಸಲಾಯಿಸಿಕೊಂಡರೆ ಹಣೆಬರಹ ತಾನಾಗಿಯೇ ಬದಲಾಗುತ್ತದೆ ಎಂದರು.

ಮಾಜಿ ತಾಪಂ ಸದಸ್ಯ ನಿಂಗಣ್ಣ ಹುಳಗೋಳಕರ್‌ ಮಾತನಾಡಿ, ಪರಿಸರದ ಅಸಮತೋಲನದಿಂದ ಬರಗಾಲಕ್ಕೆ ತುತ್ತಾಗಿದ್ದೇವೆ. ಬಿಸಿಲು ವಿಪರೀತವಾಗಿದೆ. ಕುಡಿಯಲು ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ. ಇದಕ್ಕೆಲ್ಲ ಪರಿಸರ ನಾಶವೇ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ದೇವೆಂದ್ರಪ್ಪ ಯಗೋಡಕರ್‌, ಕಾಶಣ್ಣ ಚನ್ನೂರ್‌, ಭಾಗಿರಥಿ ಗುನ್ನಾಪುರ, ಸದಾನಂದ ಕುಂಬಾರ, ನಿಂಗಣ್ಣ ಸಂಗಾವಿಕರ್‌, ವಿರೇಶ ಬಂದೆಳ್ಳಿ, ಸಿದ್ಧು ಕಣದಾಳ, ಶ್ರೀಧರ ಜೋಷಿ, ಭೀಮಯ್ಯ ಗುತ್ತೇದಾರ, ಶರಣು ಜೋಗೂರ, ಶರಣು ತುಂಗಳ, ಅಣ್ಣಪ್ಪ ದಸ್ತಾಪುರ, ಮರಲಿಂಗ ಗೋಳಾ, ವಾಸುದೇ ಚವ್ಹಾಣ ಹಾಗೂ ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ ಹಾಗೂ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next