Advertisement
ಇಂತಹದ್ದೊಂದು ಪ್ರಯೋಗವನ್ನು ತಾಲೂಕು ಶಿಕ್ಷಣ ಇಲಾಖೆ ಈಗಾಗಲೇ ಚಿತ್ತಾಪುರ, ವಾಡಿ, ಕಾಳಗಿಯಲ್ಲಿ ನಡೆಸಿದ್ದು, ಕೊನೆಯದಾಗಿ ಶಹಾಬಾದ್‌ನ ಬಸವ ಸಮಿತಿ ಶಾಲೆ ಆವರಣದಲ್ಲಿ ಕಾರ್ಯಾಗಾರ ಆಯೋಜಿಸುವ ಮೂಲಕ ಮಕ್ಕಳು, ಶಾಲಾ ಆಡಳಿತ ಮಂಡಳಿ, ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆಗೆ ಒಳಗಾಗಿದೆ.
Related Articles
Advertisement
ಕಲಬುರಗಿ ಜಿಲ್ಲೆಯ ಹೆಸರಾಂತ ಸರ್ವಜ್ಞ ಸಂಸ್ಥೆ ಸಂಸ್ಥಾಪಕ ಚೆನ್ನಾರೆಡ್ಡಿ ಪಾಟೀಲ, ವಾಗ್ಮಿಗಳಾದ ಗುರುರಾಜ ಪಾಟೀಲ ಅವರಿಂದ ಪ್ರೇರಣಾದಾಯಕ ಮಾತುಗಳನ್ನು ಹೇಳಿಸಿ, ಮಕ್ಕಳ ಮನಸ್ಸಿನಲ್ಲಿ ಧೈರ್ಯ, ಉತ್ಸಾಹ ಮತ್ತು ಆತ್ಮಬಲ ತುಂಬುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಿತು. ಒಟ್ಟಾರೆಯಾಗಿ ಮಕ್ಕಳಲ್ಲಿರುವ ಗೊಂದಲ, ಅನುಮಾನಗಳನ್ನು ಪರಿಹರಿಸಲಾಯಿತು. ಕಾರ್ಯಾಗಾರವನ್ನು ಜಸ್ಟಿಸ್ ಶಿವರಾಜ ಪಾಟೀಲ ಫೌಂಡೇಶನ್ ಸಹಕಾರದಿಂದ ನಡೆಸಲಾಗಿತ್ತು.
ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲೂ ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುವುದು ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡವಳಗಿ “ಉದಯವಾಣಿ’ಗೆ ತಿಳಿಸಿದರು.
ಸುಮಾರು ನಾಲ್ಕುವರೆ ಸಾವಿರ ಮಕ್ಕಳು ಕಾರ್ಯಾಗಾರದ ಉಪಯೋಗಪಡೆದುಕೊಂಡಿದ್ದಾರೆ. ಇದು ಕೇವಲ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ
ಕಾರ್ಯಾಗಾರವಲ್ಲದೇ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯಾಗಾರವಾಗಿದೆ. ಈ ಬಾರಿ ಉತ್ತಮ ಫಲಿತಾಂಶ ಬರಲಿದೆ.
ಶಂಕ್ರಮ್ಮ ಡವಳಗಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಚಿತ್ತಾಪುರ ಮಲ್ಲಿನಾಥ ಪಾಟೀಲ