Advertisement

ಬಸವ-ಭಗೀರಥ ಜಯಂತಿ ಆಚರಣೆಗೆ ಸಿದ್ಧತೆ

02:57 PM May 03, 2019 | Team Udayavani |

ಶಹಾಬಾದ: ನಗರಸಭೆ ಹಾಗೂ ತಾಲೂಕಾಡಳಿತ ವತಿಯಿಂದ ಮೇ 7ರಂದು ಬಸವ ಜಯಂತಿ, ಭಗೀರಥ ಜಯಂತಿಯನ್ನು ಮೇ 11 ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ವೆಂಕಟೇಶ ತಿಳಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಬಸವ ಜಯಂತಿ ಮತ್ತು ಭಗೀರಥ ಜಯಂತಿ ಆಚರಣೆ ನಿಮಿತ್ತ ತಾಲೂಕಾಡಳಿತ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನುಕುಲದ ಉದ್ಧಾರಕರಾದ ಬಸವಣ್ಣನವರು, ಭಗೀರಥ ಜಯಂತಿ ಯಾವುದೇ ಆಡಂಬರವಿಲ್ಲದೇ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದ್ದೇವೆ. ವೀರಶೈವ ಸಮಾಜ, ಲಿಂಗಾಯತ ಸಮಾಜ, ಬಸವಾದಿ ಒಕ್ಕೂಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳ, ಇತರ ಸಮುದಾಯಗಳ ಮುಖಂಡರು ಅಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಅಂದು ಬೆಳಗ್ಗೆ 8ಕ್ಕೆ ಬಸವೇಶ್ವರ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಂತರ ನಗರದ ಮುಖ್ಯ ಬೀದಿಗಳಲ್ಲಿ ಟ್ರ್ಯಾಕ್ಟರ್‌ನಲ್ಲಿ ಬಸವಣ್ಣನ ಭಾವಚಿತ್ರ ಹಾಗೂ ಮೂರ್ತಿಯ ಭವ್ಯ ಮೆರವಣಿಗೆ ನಡೆಸಿ, ನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬ್ಯಾನರ್‌, ಕಟೌಟ್ ಹಾಕಬೇಕಾದರೆ ಸಮಾಜದ ಮುಖಂಡರೇ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಲ್ಲದೇ ಬಸವ ಜಯಂತಿಯಂತೆ ಭಗೀರಥ ಜಯಂತಿಯನ್ನು ಆಚರಿಸಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯ ಎಂದರು.

ಪಿಐ ಮಹಾಂತೇಶ ಸಜ್ಜನ್‌, ಉಪ ತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರ, ಶರಣಬಸಪ್ಪ, ವೀರಶೈವ ಸಮಾಜದ ಅಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ಬಸವಾದಿ ಶರಣರ ಒಕ್ಕೂಟ ಸಮಿತಿ ಅಧ್ಯಕ್ಷ ವೈಜನಾಥ ಹುಗ್ಗಿ, ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ್‌, ಮುಖಂಡರಾದ ಶರಣಗೌಡ ಪಾಟೀಲ, ಅಣವೀರ ಇಂಗಿನಶೆಟ್ಟಿ, ಗಿರಿಮಲ್ಲಪ್ಪ ವಳಸಂಗ, ಅರುಣ ಪಟ್ಟಣಕರ್‌, ಸೂರ್ಯಕಾಂತ ಕೋಬಾಳ, ಸಾಹೇಬಗೌಡ ಬೋಗುಂಡಿ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ವಾಲಿ, ತಿಪ್ಪಣ್ಣ ನಾಟೇಕಾರ,ಶರಣಪ್ಪ ಕೊಡದೂರ, ಬಸವರಾಜ ತರನಳ್ಳಿ ನಾಗಪ್ಪ ಬೆಳಮಗಿ, ನಾಮದೇವ ಸಿಪ್ಪಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next