Advertisement

ʼಪಠಾಣ್ʼ ಟ್ರೇಲರ್‌ ಡೇಟ್‌ ಔಟ್:‌ ಹೆಚ್ಚಾಯಿತು ಫ್ಯಾನ್ಸ್‌ ಕುತೂಹಲ

04:41 PM Jan 04, 2023 | Team Udayavani |

ಮುಂಬಯಿ: ಬಿಟೌನ್‌ ನಲ್ಲಿ ಟ್ರೆಂಡ್‌ ಸೃಷ್ಟಿಸಿರುವ ʼಪಠಾಣ್‌ʼ ಸಿನಿಮಾ ಇದೇ ತಿಂಗಳಿನಲ್ಲಿ ತೆರಗೆ ಬರಲಿದೆ. ಶಾರುಖ್‌ ಖಾನ್‌ – ದೀಪಿಕಾ ಕಾಂಬಿನೇಷನ್‌ ನಲ್ಲಿ ಮೂಡಿ ಬಂದಿರುವ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆಯನ್ನು ಕಿಂಗ್‌ ಖಾನ್‌ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

Advertisement

ʼಬೇಷರಂ ರಂಗ್‌ʼ ಹಾಗೂ ʼಜೂಮೇ ಜೋ ಪಠಾಣ್‌ʼ ಹಾಡುಗಳನ್ನು ರಿಲೀಸ್‌ ಮಾಡಿ ಸುದ್ದಿಯಾಗಿರುವ ಸಿನಿಮಾ ತಂಡ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡುವ ಯೋಜನೆಯಲ್ಲಿದ್ದು, ಟ್ರೇಲರ್‌ ರಿಲೀಸ್‌ ಡೇಟ್‌ ಹೊರ ಬಿದ್ದಿದೆ.

ಸಿನಿ ಮಾರುಕಟ್ಟೆಯ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪಠಾಣ್‌ ಸಿನಿಮಾದ ಪೋಸ್ಟರ್‌ ಹಂಚಿಕೊಂಡು, ಇದೇ ಜ.10 ರಂದು ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ಬರೆದುಕೊಂಡಿದ್ದಾರೆ.

ಹಿಟ್‌ ಜೋಡಿ ಶಾರುಖ್‌, ದೀಪಿಕಾ ಜೊತೆ ಜಾನ್‌ ಅಬ್ರಹಾಂ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್‌ ಆನಂದ್‌ ʼಪಠಾಣ್‌ʼ ನಿರ್ದೇಶನ ಮಾಡಿದ್ದು, ಯಶ್‌ ರಾಜ್‌ ಫಿಲ್ಮ್ಸ್‌ ನಿರ್ಮಾಣ ಮಾಡಿದೆ. ಇದೇ ಜ.25 ರಂದು ಸಿನಿಮಾ ತೆರೆಗೆ ಬರಲಿದ್ದು, ಟಿಕೆಟ್‌ ಖರೀದಿಗಾಗಿ ಶಾರುಖ್‌ ಫ್ಯಾನ್ಸ್‌ ಕಾಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next