Advertisement

ಜವಾನ್‌ ಆಡಿಯೋಗೆ 36 ಕೋಟಿ!

03:07 PM Jul 02, 2023 | Team Udayavani |

ಶಾರುಖ್‌ ಖಾನ್ ಅಭಿನಯದ ಪಠಾಣ್‌ ಚಿತ್ರ ದೊಡ್ಡ ಹಿಟ್‌ ಆಗಿತ್ತು. ಇದರಿಂದ ಸಹಜವಾಗಿಯೇ ಅವರ ಮುಂದಿನ ಚಿತ್ರ ಜವಾನ್‌ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಚಿತ್ರದ ಆಡಿಯೋ ಹಕ್ಕುಗಳು ದಾಖಲೆಯ 36 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿವೆಯಂತೆ.

Advertisement

ಜವಾನ್‌ ಚಿತ್ರದ ಆಡಿಯೋ ಹಕ್ಕುಗಳನ್ನು ಭಾರತದ ಖ್ಯಾತ ಆಡಿಯೋ ಸಂಸ್ಥೆಯಾದ ಟಿ-ಸೀರೀಸ್‌ ತನ್ನದಾಗಿಸಿಕೊಂಡಿದ್ದು, 36 ಕೋಟಿ ರೂ.ಗಳನ್ನು ಕೊಟ್ಟು ಹಕ್ಕುಗಳನ್ನು ಪಡೆದಿದೆ ಎಂದು ಹೇಳಲಾಗಿದೆ.

ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್‌ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.ಈ ಚಿತ್ರ ವನ್ನು ಶಾರುಖ್‌ ಖಾನ್‌ ಅವರ ಪತ್ನಿ ಗೌರಿ ಖಾನ್‌ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ.

ಶಾರುಖ್‌ ಖಾನ್‌ ಜೊತೆಗೆ ನಯನತಾರಾ, ವಿಜಯ್‌ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು, ಸುನೀಲ್‌ ಗ್ರೋವರ್‌, ಸಾನ್ಯಾ ಮಲ್ಹೋತ್ರಾ ಸೇರಿದಂತ ಹಲವು ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ.

ದೀಪಿಕಾ ಪಡುಕೋಣೆ, ಸಂಜಯ್‌ ದತ್‌ ಮತ್ತು ವಿಜಯ್‌ ಅತಿಥಿ ಕಲಾವಿದರಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರ ಸೆಪ್ಟೆಂಬರ್‌ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next