Advertisement

Bollywood ನಟ ಶಾರುಖ್‌ ಖಾನ್‌ಗೆ ವೈ+ ಭದ್ರತೆ

09:45 PM Oct 09, 2023 | Team Udayavani |

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಜೀವಕ್ಕೆ ಸಂಭಾವ್ಯ ಆಪತ್ತಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಅವರಿಗೆ ವೈ+ ಭದ್ರತೆಯನ್ನು ಒದಿಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ವೈ+ ಭದ್ರತೆಯು ಆರು ಕಮಾಂಡೊಗಳು ಸೇರಿದಂತೆ 11 ಭದ್ರತಾ ಸಿಬ್ಬಂದಿ ಹಾಗೂ ಒಂದು ಪೊಲೀಸ್‌ ಎಸ್ಕಾರ್ಟ್‌ ವಾಹನ ಹೊಂದಿರುತ್ತದೆ. ಪಾವತಿ ಆಧಾರದಲ್ಲಿ ಶಾರುಖ್‌ ಅವರಿಗೆ ಈ ಭದ್ರತೆ ಒದಗಿಸಲಾಗಿದ್ದು, ಇದಕ್ಕಾಗಿ ಅವರು ಸ್ವತಃ ಹಣ ಪಾವತಿಸಬೇಕಾಗಿದೆ.

ಕಳೆದ ವಾರ ನಡೆದ ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಶಾರುಖ್‌ರಿಗೆ ಭದ್ರತೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ “ಜವಾನ್‌’ ಚಿತ್ರದ ನಂತರ ಅವರಿಗೆ ಬೆದರಿಕೆ ಕರೆಗಳು ಹೆಚ್ಚುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next