Advertisement

ಶೂಟಿಂಗ್‌ ವೇಳೆ ಅವಘಡ: ಕೂದಲೆಳೆಯಲ್ಲಿ ಪಾರಾದ ಶಾರುಖ್‌ ಖಾನ್‌

11:42 AM May 31, 2017 | Team Udayavani |

ಮುಂಬಯಿ : ಶೂಟಿಂಗ್‌ ವೇಳೆ ಅಪಘಾತಗಳಿಗೆ ಗುರಿಯಾಗುವ ದೀರ್ಘ‌ ಇತಿಹಾಸವನ್ನೇ ಹೊಂದಿರುವ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಅವರು ಇದೀಗ ಆನಂದ್‌ ಎಲ್‌ ರಾಯ್‌ ಅವರ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಸಂಭವಿಸಿದ ಅವಘಡದಲ್ಲಿ  ಯಾವುದೇ ಗಾಯಗಳಿಲ್ಲದೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಹಾಗಾಗಿ ಶಾರುಖ್‌ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 

Advertisement

ಶಾರುಖ್‌ ಖಾನ್‌ ಅವರು ಶೂಟಿಂಗ್‌ಗೆ ಸಿದ್ಧರಾಗಿ ಕುಳಿತಿದ್ದ ಸ್ಥಳದ ಮುಂಭಾಗದಲ್ಲೇ ಸೂರೊಂದರ ದೊಡ್ಡ ಭಾಗ ಕುಸಿದು ಬಿತ್ತು; ಶಾರುಖ್‌ ಕೂದಲೆಳೆಯ ಅಂತರದಲ್ಲಿ ಪಾರಾದರು; ಆದರೆ ಶೂಟಿಂಗ್‌ ಸಿಬಂದಿಗಳಿಬ್ಬರು ಗಾಯಗೊಂಡರು ಎಂದು ಮುಂಬಯಿ ಮಿರರ್‌ನ ಬಾಲಿವುಡ್‌ಲೈಫ್ ಡಾಟ್‌ ಕಾಮ್‌ ವರದಿ ಮಾಡಿದೆ. 

ಈ ಅವಘಡದ ಪರಿಣಾಮವಾಗಿ ಶಾರುಖ್‌ ಶೂಟಿಂಗನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಲಾಗಿದ್ದು ಈಗಿನ್ನು ಅದು ಈ ವಾರಾಂತ್ಯ ನಡೆಯಲಿದೆ ಎಂದು ಮುಂಬಯಿ ಮಿರರ್‌ ಹೇಳಿದೆ. 

ಶಾರುಖ್‌ ಅವರ ಈ ಹೊಸ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಕೂಡ ಇದ್ದಾರೆ. ಶಾರುಖ್‌ ಈ ಚಿತ್ರದಲ್ಲಿ ಕುಳ್ಳನಾಗಿ ನಟಿಸುತ್ತಿದ್ದಾರೆ; ಅನುಷ್ಕಾ ಮನೋವೈಕಲ್ಯದ ಹುಡುಗಿಯಾಗಿ ನಟಿಸುತ್ತಿದ್ದಾರೆ. ಯಶ್‌ ಚೋಪ್ರಾ ಅವರ ಜಬ್‌ ತಕ್‌ ಹೈ ಜಾನ್‌ ಚಿತ್ರದ ಬಳಿಕ ಇದೀಗ ಎರಡನೇ ಬಾರಿ ಶಾರುಖ್‌, ಅನುಷ್ಕಾ ಮತ್ತು ಕತ್ರೀನಾ ಜತೆಯಾಗಿ ನಟಿಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next