Advertisement

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್‌ 1 ಫ್ರೀʼ ಟಿಕೆಟ್‌ ಆಫರ್ ಘೋಷಿಸಿದ ಶಾರುಖ್‌ ಖಾನ್

10:59 AM Sep 28, 2023 | Team Udayavani |

ಮುಂಬಯಿ: ಕಿಂಗ್‌ ಖಾನ್‌ ಬ್ಯಾಕ್ ಟು ಬ್ಯಾಕ್‌ ಬಿಗ್‌ ಹಿಟ್‌ ಕೊಟ್ಟಿದ್ದಾರೆ. ʼಜವಾನ್ʼ ಸಿನಿಮಾ ಈ ವರ್ಷದ ಮತ್ತೊಂದು ದೊಡ್ಡ ಯಶಸ್ಸಾಗುವ ಮೂಲಕ ಶಾರುಖ್‌ ಖಾನ್‌ ಅವರು ಫುಲ್‌ ಖುಷ್‌ ಆಗಿದ್ದಾರೆ. ಈ ಖುಷಿಗೆ ಎಲ್ಲರೂ ಜೊತೆಯಾಗಬೇಕೆಂದು ʼಜವಾನ್‌ʼ ಚಿತ್ರತಂಡ ಪ್ರೇಕ್ಷಕರಿಗೆ ವಿಶೇಷ ಆಫರ್‌ ವೊಂದನ್ನು ಘೋಷಿಸಿದೆ.

Advertisement

ಇತ್ತೀಚೆಗಷ್ಟೇ ಅಟ್ಲಿ ನಿರ್ದೇಶನದ ʼಜವಾನ್‌ʼ ಸಿನಿಮಾ 1000 ಕೋಟಿ ಕ್ಲಬ್‌ ಸೇರಿದೆ.  ಆ ಮೂಲಕ ʼಪಠಾಣ್‌ʼ ಬಳಿಕ ಇದೇ ವರ್ಷ ಮತ್ತೊಂದು ದೊಡ್ಡ ಹಿಟ್ ಕೊಟ್ಟಿದ್ದಾರೆ. ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಸಿನಿಮಾ 576.23 ಕೋಟಿ ರೂ.ಗಳಿಸಿದೆ. ವರ್ಲ್ಡ್‌ ವೈಡ್‌ ಸೇರಿ 1000 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಇನ್ನು ಕೂಡ ʼಜವಾನ್‌ʼ ವಿಜಯ ಯಾತ್ರೆ ಮುಂದುವರೆದಿದೆ.

ಬ್ಲಾಕ್‌ ಬಸ್ಟರ್‌ ಸಕ್ಸಸ್‌ ಆದ ಬೆನ್ನಲ್ಲೇ ಸಿನಿಮಾ ತಂಡ ʼಬೈ1 ಗೆಟ್‌ 1 ಫ್ರೀʼ ಟಿಕೆಟ್‌ ಆಫರ್‌ ನ್ನು ಘೋಷಿಸಿದೆ. ಈ ಬಗ್ಗೆ ಟ್ವಿಟರ್‌ (ಎಕ್ಸ್)‌ ನಲ್ಲಿ ಬರೆದುಕೊಂಡಿರುವ ಶಾರುಖ್ ಖಾನ್‌ “ಅಣ್ಣ – ತಂಗಿ, ಶತ್ರುವಿಗೆ, ಸ್ನೇಹಿತರಿಗೆ ಹಾಗೂ ಮುಖ್ಯವಾಗಿ ನಿಮ್ಮನ್ನು ಪ್ರೀತಿಸುವವರಿಗೆ ʼಜವಾನ್ʼ (ಸೆ.28 ರಂದು) ತೋರಿಸಿ. ದೊಡ್ಡಪ್ಪ – ದೊಡ್ಡಮ್ಮ,  ಚಿಕ್ಕಪ್ಪ, ಚಿಕ್ಕಮ್ಮ, ಮಾಮ – ಮಾಮಿ ಒಟ್ಟಿನಲ್ಲಿ ಎಲ್ಲ ಕುಟುಂಬದವರಿಗೆ ಒಂದು ಟಿಕೆಟ್‌ ಕೊಂಡರೆ ಒಂದು ಟಿಕೆಟ್‌ ಫ್ರೀ. ಕೇವಲ 1 ಟಿಕೆಟ್  ಖರೀದಿಸಿ ಒಂದು ಟಿಕೆಟ್‌ ಫ್ರೀ ಪಡೆದು, ಇಡೀ ಕುಟುಂಬದೊಂದಿಗೆ ಮನರಂಜನೆ ಅನುಭವಿಸಿ” ಎಂದು ಶಾರುಖ್‌ ಟ್ವೀಟ್‌ ಮಾಡಿದ್ದಾರೆ.

ಇಂಟರ್‌ ನೆಟ್‌ ನಲ್ಲಿ( ಬುಕ್‌ ಮೈ ಶೋ, ಪೇಟಿಎಂ ಮೂವೀಸ್‌, ಪಿವಿಆರ್‌ ಐನಾಕ್ಸ್..)‌ ಮೂಲಕ ಬುಕ್ಕಿಂಗ್‌ ಮಾಡಿದವರಿಗೆ ಮಾತ್ರ ಈ ಆಫರ್‌ ದೊರೆಯಲಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಟಿಕೆಟ್ ಬುಕ್‌ ಮಾಡಬೇಕೆಂದು ಚಿತ್ರತಂಡ ಪೋಸ್ಟರ್‌ ನಲ್ಲಿ ಹೇಳಿದೆ.

‘ಜವಾನ್’ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್‌ ಆಗಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next