Advertisement

ಶಾ ನಿಷೇಧ ಅವಧಿಗೆ ಅಸಮಾಧಾನ

02:12 AM Aug 02, 2019 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಪೃಥ್ವಿ ಶಾ ಅವರಿಗೆ ಉದ್ದೀಪನ ಸೇವನೆ ಪ್ರಕರಣದಲ್ಲಿ ಬಿಸಿಸಿಐ 8 ತಿಂಗಳು ನಿಷೇಧ ಹೇರಿದೆ. ಇದರಲ್ಲಿ 4 ತಿಂಗಳನ್ನು ಮಾರ್ಚ್‌ ನಿಂದ ಪೂರ್ವಾನ್ವಯವಾಗುವಂತೆ ವಿಧಿಸಲಾಗಿದೆ. ಈ ಕ್ರಮಕ್ಕೆ ಬಿಸಿಸಿಐನ ಕೆಲವು ಹೆಸರು ಹೇಳಲು ಬಯಸದ ಕೆಲವು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಮಾರ್ಚ್‌ನಿಂದ ನವೆಂಬರ್‌ವರೆಗೆ ಪೃಥ್ವಿ ಶಾಗೆ ಶಿಕ್ಷೆ ವಿಧಿಸಲಾಗಿದೆ. ಮಾರ್ಚ್‌ 23ರಿಂದ-ಮೇ 10ರ ವರೆಗೆ ಪೃಥ್ವಿ ಶಾ ಡೆಲ್ಲಿ ಡೇರ್‌ಡೆವಿಲ್ಸ್ ಪರ ಐಪಿಎಲ್ ಆಡುತ್ತಿದ್ದರು. ಆದ್ದರಿಂದ ಅದು ನಿಷೇಧದ ಅವಧಿ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಮಾರ್ಚ್‌ನಿಂದ ಪೂರ್ವಾನ್ವಯ ಮಾಡಿರುವುದರಿಂದ ಪೃಥ್ವಿ ಶಾಗೆ ಈಗಾಗಲೇ 4 ತಿಂಗಳು ಶಿಕ್ಷೆ ಅನುಭವಿ ಸಿದಂತಾಗಿದೆ. ಅವರ ಪಾಲಿಗೆ ಉಳಿದಿ ರುವುದು ಇನ್ನು 4 ತಿಂಗಳು ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next