Advertisement
ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಮೊದ ಲೆರಡು ಟಿ20 ಪಂದ್ಯಗಳಲ್ಲಿ 23 ಮತ್ತು 47 ರನ್ ಬಾರಿಸಿದ್ದು ಶಫಾಲಿ ವರ್ಮ ಅವರ ರ್‍ಯಾಂಕಿಂಗ್ ಪ್ರಗತಿಗೆ ಕಾರಣವಾಯಿತು.
17 ವರ್ಷದ ಶಫಾಲಿ ಇದಕ್ಕೂ ಮೊದಲು ಆಸ್ಟ್ರೇಲಿಯದಲ್ಲಿ ನಡೆದ ಐಸಿಸಿ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿ ವೇಳೆ ನಂ.1 ಸ್ಥಾನ ಅಲಂಕರಿಸಿದ್ದರು. ಅಂದು ಭಾರತವನ್ನು ನಾಕೌಟ್ ಹಂತಕ್ಕೆ ತಲುಪಿಸುವಲ್ಲಿ ಶಫಾಲಿ ನಿರ್ವಹಿಸಿದ ಪಾತ್ರ ಅಮೋಘವಾಗಿತ್ತು. ಬ್ಯಾಟಿಂಗ್ ರ್‍ಯಾಂಕಿಂಗ್‌ನ ಟಾಪ್-10 ಯಾದಿಯಲ್ಲಿರುವ ಭಾರತದ ಉಳಿದಿಬ್ಬರು ಆಟಗಾರ್ತಿಯರೆಂದರೆ ಸ್ಮತಿ ಮಂಧನಾ (7) ಮತ್ತು ಜೆಮಿಮಾ ರೋಡ್ರಿಗಸ್ (9).
Related Articles
Advertisement
ನ್ಯೂಜಿಲ್ಯಾಂಡಿನ ನಾಯಕಿ ಸೋಫಿ ಡಿವೈನ್ 3ನೇ, ಆಸ್ಟ್ರೇಲಿಯದ ಮೆಗ್ ಲ್ಯಾನಿಂಗ್ ಮತ್ತು ಅಲಿಸ್ಸಾ ಹೀಲಿ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ. ಪ್ರಚಂಡ ಫಾರ್ಮ್ನಲ್ಲಿರುವ ದಕ್ಷಿಣ ಆಫ್ರಿಕಾದ ಲಿಜೆಲ್ ಲೀ 3 ಸ್ಥಾನಗಳ ಪ್ರಗತಿ ಸಾಧಿಸಿ 11ಕ್ಕೆ ಏರಿದ್ದಾರೆ.