Advertisement
ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಕೇಂದ್ರ ಕಾರಾಗೃಹ ಹಾಗೂ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಶಶಿಕಲಾ, ಅವರ ಸ್ನೇಹಿತೆ ಇಳವರಸಿ, ಜಯಲಲಿತಾ ದತ್ತುಪುತ್ರ ಸುಧಾಕರನ್ ವಿಶೇಷ ಕೋರ್ಟ್‌ನ ನ್ಯಾಯಾಧೀಶರ ಎದುರು ಶರಣಾಗ ಬೇಕಿದೆ. ಬಳಿಕ ಕೋರ್ಟ್‌ನ ನಿಯಮಗಳು ಮುಗಿದ ಬಳಿಕ ಮೂವರನ್ನು ಪರಪ್ಪನ ಅಗ್ರಹಾರ ಕಾರಗೃಹಕ್ಕೆ ರವಾನಿಸಲಾಗುತ್ತದೆ.
Related Articles
Advertisement
ಹೀಗಾಗಿ, ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಶಶಿಕಲಾ ಅವರಿಗೆ ಅಷ್ಟು ಭದ್ರತೆ ಕೊಡಲಾಗದು. ಆದರೆ ಅವರು ಇಲ್ಲಿ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಾರಾಗೃಹದ ಬಳಿ ಭದ್ರತೆ ಕಲ್ಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಭದ್ರತೆಯಲ್ಲಿ ದಾಖಲೆ: ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಪ್ರಕರಣಟವಾದಾಗ ಶಾಂತಿ- ಸುವ್ಯವಸ್ಥೆ ಮತ್ತು ಭದ್ರತೆಗಾಗಿ ಪರಪ್ಪನ ಅಗ್ರಹಾರ ಸುತ್ತಮುತ್ತ ಐದು ಸಾವಿರ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ರು. ಈ ಬೆಳವಣಿಗೆ ಭದ್ರತೆ ವಿಚಾರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.
ಯಡಿಯೂರಪ್ಪ ವಿರುದ್ಧದ ಡಿನೋಟಿಕೇಷನ್ ಪ್ರಕರಣದ ತೀರ್ಪು ಪ್ರಕಟವಾಗಿದ್ದ ವೇಳೆ ಒದಗಿಸಿದ್ದ ಭದ್ರತೆ ಇದುವರೆಗಿನ ಅತಿ ಹೆಚ್ಚಿನ ಭದ್ರತೆಯ ತೀರ್ಪಾಗಿತ್ತು. ಆದರೆ, ಜಯಲಲಿತಾ ಪ್ರಕರಣದಲ್ಲಿ ಸುಮಾರು ಐದು ಸಾವಿರ ಪೊಲೀಸ್ ಸರ್ಪಗಾವಲಿನ ನಡುವೆ ತೀರ್ಪು ಪ್ರಕಟಗೊಂಡು ಹೊಸ ಇತಿಹಾಸ ಬರೆದಿತ್ತು.
ಜಯಲಲಿತಾ ಇದ್ದ ಕೊಠಡಿಗೆ ಶಶಿಕಲಾಶಶಿಕಲಾ ಸೇರಿ ಮೂವರನ್ನು ಕಾರಾಗೃಹಕ್ಕೆ ಒಪ್ಪಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೂ ನಾವು ನಮ್ಮ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕೇಂದ್ರ ಕಾರಗೃಹದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಈ ಹಿಂದೆ ಜಯಲಲಿತಾ ಅವರಿದ್ದ ಕೊಠಡಿಯಲ್ಲೇ ಶಶಿಕಲಾ ಹಾಗೂ ಇಳವರಸಿಯನ್ನು ಇಡುವ ಸಾಧ್ಯತೆ ಇದೆ. ಜಯಲಲಿತಾ ಸಾಕುಮಗ ಸುಧಾಕರ್ ಅವರನ್ನು 2ನೇ ಮಹಡಿಯಲ್ಲಿರುವ ವಿಐಪಿ ಸೆಲ್‌ನಲ್ಲಿ ಇರಿಲಾಗುತ್ತದೆ ಎಂದು ಕೇಂದ್ರ ಕಾರಾಗೃಹದ ಮೂಲಗಳು ತಿಳಿಸಿವೆ.