Advertisement

ಮಧ್ಯಾಹ್ನ 12.18ಕ್ಕೆ ಮಾಯವಾದ ನೆರಳು

10:02 AM Apr 26, 2019 | Lakshmi GovindaRaju |

ಬೆಂಗಳೂರು: ನಗರದ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ ಶೂನ್ಯ ನೆರಳು ದಿನದ ಹಿನ್ನೆಲೆ ಬುಧವಾರ ಪ್ರಾತ್ಯಕ್ಷಿಕೆ ನಡೆಯಿತು. ತಾರಾಲಯದ ಆವರಣದಲ್ಲಿ ಸುಮಾರು ಒಂದೂವರೆ ಮೀಟರ್‌ ಉದ್ದದ ಕಂಬ ಇಡಲಾಗಿತ್ತು. ಬೆಳಗ್ಗೆಯಿಂದ ಕಾಣುತ್ತಿದ್ದ ಆ ಕಂಬದ ನೆರಳು ಚಿಕ್ಕದಾಗುತ್ತಾ ಬಂದು ಮಧ್ಯಾಹ್ನ 12.18 ಕ್ಕೆ ಮಾಯವಾಯಿತು.

Advertisement

ಇದರ ಜತೆಗೆ ಆಯತಾಕಾರದ ಮೂರು ಹಲಗೆಗಳನ್ನು ಒಂದರ ಮೇಲೊಂದು ಜೋಡಿಸಲಾಗಿತ್ತು. ಇದರಲ್ಲಿ “ಜೀರೊ ಶಾಡೊ ಡೇ’ ಎಂದು ಸಣ್ಣ ರಂಧ್ರಗಳಿಂದ ಬರೆಯಲಾಗಿತ್ತು. ಇದರ ಮೇಲೆ ಬಿಸಿಲು ಬಿದ್ದಾಗ ಮೂರು ಹಲಗೆಗಳ ಕೆಳಗಿನ ಖಾಲಿ ಹಲಗೆಯಲ್ಲಿ “ಜೀರೊ ಶಾಡೊ ಡೇ’ ಎಂದು ಓದಲು ಸಾಧ್ಯವಾಗುವಂತೆ ಪೂರ್ಣ ಅಕ್ಷರಗಳ ಬಿಂದುಗಳು ಕಂಡುಬಂತು.

ಕಾರ್ಯಕ್ರಮದಲ್ಲಿ ತಾರಾಲಯದ ನಿರ್ದೇಶಕ ಪ್ರಮೋದ್‌ ಜಿ.ಗಲಗಲಿ ಮಾತನಾಡಿ, ನೂರಾರು ವರ್ಷಗಳ ಹಿಂದೆಯೂ ದೇಶದ ವಿಜ್ಞಾನಿಗಳು ಶೂನ್ಯ ನೆರಳಿನ ದಿನವನ್ನು ವಿಶೇಷ ದಿನವೆಂದು ಪರಿಗಣಿಸಿ ಪ್ರಯೋಗಗಳನ್ನು ಮಾಡುತ್ತಿದ್ದರು. ಈ ಬಾರಿ ಬೆಂಗಳೂರಿನಲ್ಲಿ ಏ.24 ಹಾಗೂ ಆ.19 ರಂದು ಶೂನ್ಯ ನೆರಳಿನ ದಿನ ಉಂಟಾಗುತ್ತದೆ.

ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಶೂನ್ಯ ನೆರಳಿನ ದಿನದಂದು ವಿವಿಧ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇನ್ನು ಕಾರ್ಯಗಾರದಲ್ಲಿ ಭಾಗವಹಿಸಿದ್ದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆರಳ ಮಾಯವ ವಿಸ್ಮಯವನ್ನು ಚಕಿತರಾಗಿ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next