ತಿರುವನಂತಪುರ: ಮಹಿಳೆಯರ ಪ್ರವೇಶ ಸಂಬಂಧ ಹಿಂಸಾತ್ಮಕ ಪ್ರತಿಭಟನೆ ಗಳಿಗೆ ಸಾಕ್ಷಿಯಾದ ಶಬರಿಮಲೆಯಲ್ಲಿ 2 ತಿಂಗಳ ಯಾತ್ರೆ ಸಮಾರೋಪಗೊಂಡಿದ್ದು, ರವಿವಾರ ಅಯ್ಯಪ್ಪ ದೇಗುಲವನ್ನು ಮುಚ್ಚಲಾಗಿದೆ. ದೇಗುಲ ಮುಚ್ಚುತ್ತಿರು ವಂತೆ, ಪ್ರತಿಪಕ್ಷ ಬಿಜೆಪಿ ಹಮ್ಮಿಕೊಂಡಿದ್ದ 49 ದಿನಗಳ ನಿರಶನವೂ ಅಂತ್ಯಗೊಂಡಿದೆ. ಶಬರಿಮಲೆಯಲ್ಲಿ ನಿಷೇಧಾಜ್ಞೆ ವಾಪಸ್ ಪಡೆಯಬೇಕು ಎಂದು ಕೋರಿ 49 ದಿನ ಗಳಿಂದ ಬಿಜೆಪಿ ನಾಯಕರು ನಿರಶನ ನಡೆಸುತ್ತಿದ್ದರು. ದೇಗುಲ ಮುಚ್ಚಿದರೂ ರಾಜಕೀಯ ವಾಕ್ಸಮರ ರವಿವಾರವೂ ಮುಂದುವರಿದಿತ್ತು. ಬಿಜೆಪಿ, ಸಂಘ ಪರಿವಾರವು ಪರಿಸ್ಥಿತಿ ಹದಗೆಡಿಸಲು ನಡೆ ಸಿದ ಎಲ್ಲ ಯತ್ನಗಳೂ ವಿಫಲವಾದವು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾ ಧ್ಯಕ್ಷ ಶ್ರೀಧರನ್ ಪಿಳ್ಳೆ„ ಮಾತನಾಡಿ, ನಾವು ಭಕ್ತರ ನಂಬಿಕೆಯನ್ನು ಉಳಿಸುವ ಸಲುವಾಗಿ ಹೋರಾಡಿದ್ದೇವೆ. ಇದಕ್ಕೆ ನಮಗೆ ಜನಬೆಂಬಲ ಸಿಕ್ಕಿದೆ ಎಂದಿದ್ದಾರೆ. ಶಬರಿಮಲೆ ಕರ್ಮ ಸಮಿತಿ ರವಿವಾರ ಸಂಜೆ ಭಕ್ತರು, ಧಾರ್ಮಿಕ ನಾಯಕರ ಸಭೆಯನ್ನೂ ಆಯೋಜಿಸಿತ್ತು.
ಸಮಾಜದಲ್ಲಿ ಬದಲಾವಣೆ ಆಗಬೇಕಾದ್ದು ಅಗತ್ಯ. ಆದರೆ, ಪ್ರತಿ ದೇಗುಲವೂ ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಆ ಸಂಪ್ರದಾಯ ಗಳನ್ನು ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ.
ಮಾತಾ ಅಮೃತಾನಂದಮಯಿ, ಅಧ್ಯಾತ್ಮ ಗುರು