Advertisement

ಇಬ್ಬರು ಮಹಿಳೆಯರಿಗೆ ತಡೆ

06:00 AM Dec 02, 2018 | |

ತಿರುವನಂತಪುರ: ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದ ಶಬರಿಮಲೆ ವಿವಾದ ಮತ್ತೆ ಕಾವೇರುವ ಲಕ್ಷಣ ಗೋಚರಿಸಿದೆ. ಶನಿವಾರ ಆಂಧ್ರ ಪ್ರದೇಶದ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾಗಿದ್ದು, ಅವರನ್ನು ಪ್ರತಿಭಟನಾಕಾರರು ತಡೆದ ಘಟನೆ ನಡೆದಿದೆ.

Advertisement

15 ಮಂದಿ ಯಾತ್ರಿಕರ ತಂಡದೊಂದಿಗೆ ಆಂಧ್ರದ ನವೋಜಮ್ಮ(32) ಹಾಗೂ ಕೃಪಾ ವತಿ (42) ಕೂಡ ದೇಗುಲ ಪ್ರವೇಶಿಸಲೆಂದು ಆಗಮಿಸಿದ್ದರು. ಮರಕೂಟ್ಟಂ ತಲುಪುತ್ತಿ ದ್ದಂತೆ, ಪ್ರತಿಭಟನಾಕಾರರ ಗುಂಪು ಅವರನ್ನು ತಡೆಯಿತು. ಕೊನೆಗೆ ಇಬ್ಬರೂ ಅಲ್ಲಿಂದ ವಾಪಸಾಗಿ, ಪಂಪಾಗೆ ಬರುತ್ತಿದ್ದಂತೆ ಪ್ರತಿಭಟನಾಕರಾರರ ಸಂಖ್ಯೆ ಹೆಚ್ಚಾಗತೊಡಗಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಇಬ್ಬರನ್ನೂ ಪಂಪಾ ಪೊಲೀಸ್‌ ಠಾಣೆಗೆ ಕರೆದೊಯ್ದರು. ಜೊತೆಗೆ, ಇವರಿಗೆ ಅಡ್ಡಿಪಡಿಸಿದ ಸುಭಾಷ್‌, ಸಂತೋಷ್‌ ಹಾಗೂ ಮಹೇಶ್‌ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮಹಿಳಾ ಪೊಲೀಸರಿಗೆ ನಗದು ಬಹುಮಾನ: ಇನ್ನೊಂದೆಡೆ, ಶಬರಿಮಲೆ ವಿವಾದದ ನಡುವೆಯೇ, ನ.16ರಂದು ಅಯ್ಯಪ್ಪ ದೇಗು ಲಕ್ಕೆ ತೆರಳುತ್ತಿದ್ದ ಹಿಂದೂ ಐಕ್ಯ ವೇದಿ ರಾಜ್ಯಾಧ್ಯಕ್ಷೆ ಕೆ.ಪಿ. ಶಶಿಕಲಾ ಅವರನ್ನು ಬಂಧಿಸಿದ್ದ ಮಹಿಳಾ ಪೊಲೀಸರಿಗೆ ಕೇರಳ ಪೊಲೀಸ್‌ ಇಲಾಖೆ ನಗದು ಬಹುಮಾನ ಘೋಷಿ ಸಿದೆ. ಈ ಕುರಿತು ಶನಿವಾರ ಪೊಲೀಸ್‌ ಇಲಾಖೆಯೇ ಮಾಹಿತಿ ನೀಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬುದನ್ನು ಗ್ರಹಿಸಿ ಶಶಿಕಲಾರನ್ನು ಬಂಧಿಸಿದ ಇಬ್ಬರು ಮಹಿಳಾ ಅಧಿಕಾರಿಗಳಿಗೆ ತಲಾ ಒಂದು ಸಾವಿರ ರೂ.ಗಳು ಹಾಗೂ 8 ಪೊಲೀಸ್‌ ಸಿಬ್ಬಂದಿಗೆ ತಲಾ 500 ರೂ.ಗಳನ್ನು ಬಹುಮಾನವಾಗಿ ನೀಡಲಾಗಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next