Advertisement
ಸರ್ವೋತ್ಛ ನ್ಯಾಯಾಲಯವು ಎಲ್ಲಾ ವಯೋಮಾನದ ಸ್ತ್ರೀಯರಿಗೂ ಶಬರಿಮಲೆ ದರ್ಶನ ನಡೆಸಬಹುದೆಂಬ ತೀರ್ಪನ್ನು ರಾಜಕೀಯ ಲಾಭ ಪಡೆಯಲು ಮುಂದಾಗಿ ಚುನಾವಣೆಯಲ್ಲಿ ಭಂಗಕ್ಕೀಡಾಗಬೇಕಾ ಯಿತು. ಸರ್ವೋತ್ಛ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಿದ ಐಕ್ಯರಂಗ ಮತ್ತು ಬಿ.ಜೆ.ಪಿ.ಗೆ ಪಾಠ ಕಲಿಸಲು ಎಡರಂಗ ಸರಕಾರ ಹೊರಟು ನಾಸ್ತಿಕ ಯುವತಿಯರನ್ನು ಕ್ಷೇತ್ರ ಪ್ರವೇಶಿಸಲು ಅನುಮತಿ ನೀಡಿ ಜೇನುಗೂಡಿಗೆ ಕಲ್ಲೆಸದಂತಾಗಿದೆ. ಯುವತಿಯರ ಪ್ರವೇಶವನ್ನು ತಡೆಯುವ ಬಿಜೆಪಿ ನಿಲುವನ್ನು ವಿರೋಧಿಸಿ ಶಬರಿಮಲೆ ಆಚಾರ ಸಂಹಿತೆಗೆ ಭಂಗ ತರಲು ಯತ್ನಿಸಿಚುನಾವಣೆಯಲ್ಲಿ ಮುಗ್ಗರಿ ಬೇಕಾಯಿತು ಎನ್ನುತ್ತಾರೆ ಮತದಾರರು.
Related Articles
Advertisement
ಸಿಪಿಎಂ - ಸಿಎಂ ನಿಲುವು ಬದಲಾಯಿಸಬೇಕಾಗಿದೆ ತತ್ವಸಿದ್ಧಾಂತ ಪಕ್ಷವಾದ ಸಿಪಿಎಂ ಪಕ್ಷದ ಮತಗಳು ಅನ್ಯಪಾಲಾಗಿದೆ.ಮೋದಿ ವಿರುದ್ಧದ ಅಲ್ಪಸಂಖ್ಯಾತರ ಮತ ಕೋಡೀಕರಣವಾಗಿದೆ .ಬಿಜೆಪಿ ಮತಗಳು ಬಲ್ಕ್ ಆಗಿ ಐಕ್ಯರಂಗ ಪಾಲಾಗಿದೆ ಎಂಬುದಾಗಿ ಸಿಪಿಎಂ ಸಮರ್ಥಿಸಿ ಪಕ್ಷದ ಅಸಮರ್ಥನೆಗೆ ಅಡಿಗೆ ಬಿದ್ದರೂ ಮೂಗು ಮೇಲೆನ್ನುತ್ತಿದೆ.ಆದರೂ ಇದೀಗ ಹಠಮಾರಿತನ ಬಿಡದ ಸಿಎಂ ಸೋತರೂ ತನ್ನ ನಿಲುವು ಬದಲಾಯಿಸುವುದಿಲ್ಲ ವೆಂಬುದಾಗಿ ಸಾರಿದ್ದಾರೆ. ನಿಲುವು ಬದಲಾಯಿಸದರಿ ಇದರಿಂದ ನಮ್ಮ ಪಕ್ಷಕ್ಕೆ ಇನ್ನೂ ಲಾಭವಾಗಲಿದೆ ಎಂಬುದಾಗಿ ಪ್ರತಿಪಕ್ಷದ ನಾಯಕರು ಸವಾಲೊಡ್ಡಿದ್ದಾರೆ. ಲಕ್ಷಾನುಗಟ್ಟಲೆ ಅಯ್ಯಪ್ಪ ಭಕ್ತರ ಭಾವನಗೆ ಧಕ್ಕೆಯಾದ ಆಚಾರ ಸಂಹಿತೆ ಉಲ್ಲಘನೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿರುವುದಾಗಿಯೂ ಇದನ್ನು ತಿದ್ದಿಕೊಳ್ಳದಿದ್ದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಹೊಡೆತವಾಗಲಿದೆ ಎಂಬುದಾಗಿ ಎಡಪಕ್ಷದ ಅಯ್ಯಪ್ಪ ಭಕ್ತರ ಅನಿಸಿಕೆಯಾಗಿದೆ. ಆದುದರಿಂದ ಸಿ.ಪಿ.ಎಂ. ಮತ್ತು ಸಿಎಂ ನಿಲುವು ಬದಲಾಯಿಸಬೇಕಾಗಿದೆ.ರಾಜ್ಯ ಸಿಎಂ ಶಬರಿಮಲೈ ಆಚಾರ ಉಲ್ಲಂಘನೆಗೆ ಪ್ರಾಯಶ್ಚಿತವಾಗಿ ಮಾಲೆ ಧರಿಸಿ 40 ದಿನ ವ್ರತಾಚರಣೆ ಆಚರಿಸಿ ಶ್ರೀ ಶಬರಿಮಲೆ ಯಾತ್ರೆ ಕೈಗೋಡು ಪಾಪ ಪರಿಹಾರ ಮಾಡಿಕೊಳ್ಳಬೇಕೆಂಬುದಾಗಿ ಐಕ್ಯರಂಗದ ನಾಯಕರು ಛೇಡಿಸುತ್ತಿರುವರು. ಅಂತೂ ಶಬರಿಮಲೆ ವಿಚಾರದಲ್ಲಿ ರಾಜ್ಯದ ರಾಜಕೀಯ ನಿಲುವು ಬದಲಾಗಿ ಎಡರಂಗಕ್ಕೆ ಮೈನಸ್ ಆಗಿ ಐಕ್ಯರಂಗಕ್ಕೆ ಪ್ಲಸ್ ಆಗಿರುವುದಂತೂ ಸತ್ಯವಾಗಿದೆ. ಬಿಜೆಪಿಗೆ ನಾಯಕರ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆ
ಸವೋತ್ಛ ನ್ಯಾಯಾಲಯದ ತೀರ್ಪನ್ನು ಆರಂಭದಲ್ಲಿ ಸ್ತ್ರೀ ಸ್ವಾತಂತ್ರ್ಯದ ನೆಪದಲ್ಲಿ ಬಿಜೆಪಿಯ ಕೆಲವು ನಾಯಕರು ಸ್ವಾಗತಿಸಿರುವುದೂ ಈ ಪಕ್ಷಕ್ಕೆ ಚುನಾವಣೆಯಲ್ಲಿ ಮುಳುವಾಯಿತು.ಮುಂದಿನ ಶಬರಿಮಲೆ ಪ್ರತಿಭಟನೆಯಲ್ಲಿ ಇದನ್ನು ಪ್ಯಾಚಪ್ ಮಾಡುವಲ್ಲಿ ಪಕ್ಷ ವಿಫಲವಾಯಿತು.ಎಂಬ ಅನಿಸಿಯೂ ಸ್ವಪಕ್ಷೀಯರದ ಬಿ.ಜೆ.ಪಿ. ಪಕ್ಷ ದ ಅಭ್ಯರ್ಥಿಗಳು ರಾಜ್ಯದಲ್ಲಿ ಗೆಲ್ಲುವುದಿಲ್ಲ.ಆದ ಕಾರಣ ಗೆಲುವಿನ ಐಕ್ಯರಂಗದ ಅಭ್ಯರ್ಥಿಗಳಿಗೆ ಬಿಜೆಪಿಯ ಅಯ್ಯಪ್ಪ ಭಕ್ತರು ಮತಹಾಕಿ ಎಡರಂಗದ ಮೇಲಿನ ರಾಜಕೀಯ ಸೇಡು ತೀರಿಸಿಕೊಂಡರು. ಮಾತ್ರವಲ್ಲದೆ ಕೆಲವೊಂದು ಅಯ್ಯಪ್ಪ ಸಿಪಿಎಂ ಭಕ್ತರೂ ಅಡ್ಡ ಮತ ಚಲಾಯಿಸಿದರು.ಇದು ಐಕ್ಯರಂಗಕ್ಕೆ ಲಾಭವಾಯಿತು.