ಕಲಬುರಗಿ: ತನ್ನ ಕಾಲ ಘಟ್ಟದಲ್ಲಿ ನಡೆಯುತ್ತಿರುವ ನೈಜ ಸತ್ಯಗಳ ಮೇಲೆ ಬೆಳೆಕು ಚೆಲ್ಲುವ ಮೂಲಕ ಗುದ್ದು ನೀಡಿದ ಕನ್ನಡ ಸಾಹಿತ್ಯ ಸಮ್ಮೇಳನ, ರವಿವಾರ ಸಂಜೆ ಸಮಾರೋಪಗೊಂಡಿತು. ಒಂದೆಡೆ ತನ್ನ ನಿರ್ಣಯಗಳಿಂದ ಜನ ಮೆಚ್ಚುಗೆ ಗಳಿಸುವ ಮೂಲಕ ಹೆಮ್ಮೆ ಪಡುವಂತೆ ಆಗಿದ್ದ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಬರಬೇಕಾಗಿರುವ ಯಾವುದೇ ಅತಿಥಿ ಗಣ್ಯರು ಆಗಮಿಸಿರಲಿಲ್ಲ ಎನ್ನುವುದು ಬೇಸರವನ್ನುಂಟು ಮಾಡಿತ್ತು.
ಎರಡನೇ ದಿನಗಳ ಮೂರು ಗೋಷ್ಠಿಗಳು ಮತ್ತು ಕವಿಗೋಷ್ಠಿ ಮುಗಿಯುತ್ತಿದ್ದಂತೆ ಬಹಿರಂಗ ಅಧಿವೇಶನ ನಡೆದು ಸಮಾರೋಪಕ್ಕೆ ವಾಲುತ್ತಿದ್ದಂತೆ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಿದ್ದ ಯಾರೊಬ್ಬರು ಅತಿಥಿಗಳು ಬಂದಿರಲಿಲ್ಲ. ಆಭಾಸ ಮುಚ್ಚಿಡಲು ವೇದಿಕೆಯಲ್ಲಿ ಆಯೋಜಕರು ನಿರ್ಣಯ ಮಂಡಿಸುತ್ತಲೇ ಸಮಾರೋಪಕ್ಕೆ ಕಳೆತಂದರು. ಇದರೊಂದಿಗೆ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ತೆರೆ ಕಂಡಿತು.
ನಿರ್ಣಯಗಳಿಂದ ಗಮನ ಸೆಳೆದ ಸಮ್ಮೇಳನ. ಸಾರ್ವಕಾಲಿಕ ತನ್ನತನವನ್ನು ಮೆರೆಯಿತು. ಈ ಭಾಗದಲ್ಲಿ ನಡೆಯುತ್ತಿದ್ದ ಗುಜ್ಜರ್ ಮದುವೆಗಳನ್ನು ಬಾಲ್ಯ ವಿವಾಹಕ್ಕೆ ಹೋಲಿಸದೆ ಪ್ರತ್ಯೇಕ ದೂರು ದಾಖಲಿಸಿಕೊಂಡು ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳನ್ನಾಗಿ ಪರಿವರ್ತಿಸಬೇಕು ಎಂದು ಸರಕಾರ ಹಾಗೂ ಆಡಳಿತಶಾಹಿಗಳಿಗೆ ಎಚ್ಚರಿಕೆ ನೀಡಲಾಯಿತು.
ನಿರ್ಣಯಗಳನ್ನು ಸುಭಾಸ ಕೋಣಿನ್,ಅಪ್ಪಾರಾವ ಕುಲಕರ್ಣಿ, ಕೆ.ಎಸ್.ಹಿರೇಮಠ, ವೀರಭದ್ರ ಸಿಂಪಿ,ಎಸ್.ಡಿ. ಕಟ್ಟಿಮನಿ, ಶಂಭುಲಿಂಗ ವಾಣಿ ಮತ್ತು ಶಿವನಗೌಡ ಹಂಗರಗಿ ಅವರುಗಳು ಮಂಡಿಸಿದರು. ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷ ಸಿದ್ದರಾಮ ಪೊಲೀಸ್ ಪಾಟೀಲ, ಅಧ್ಯಕ್ಷ ಸಿಂಪಿ, ಯಾದಗಿರಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಡಾ| ಚಿ.ಸಿ.ನಿಂಗಣ್ಣ, ಡಾ| ಭೀಮರಾಯ ಅರಿಕೇರಿ, ಡಾ| ಅನೀಲಕುಮಾರ ಹಾಲು, ವಿಜಯಕುಮಾರ ಸಾಲಿಮಠ, ಸೂರ್ಯಕಾಂತ ಪಾಟೀಲ, ಜಿ.ಜಿ. ವಣಿಕ್ಯಾಳ್, ಡಾ| ಸೋಮಶಂಕರ ಮಠ, ಡಾ| ನಾಗಪ್ಪ ಗೋಗಿ, ಡಾ| ಪದ್ಮರಾಜ ರಾಸಣಗಿ, ದೌಲತರಾವ ಪಾಟೀಲ,
ಡಾ| ಸುಜಾತಾ ಬಂಡೇಶರೆಡ್ಡಿ, ಶಿವಾನಂದ ಕಶೆಟ್ಟಿ, ವಿಶ್ವನಾಥ ಭಕರೆ, ವೀರ ಸಂಗಪ್ಪ ಸುಲೇಗಾಂವ್, ಲಿಂಗರಾಜ ಶಿರಗಾಪುರ, ಸಿ.ಎಸ್. ಮಾಲಿಪಾಟೀಲ, ಮಲ್ಲಿಕಾರ್ಜುನ ಪಾಲಮಾರ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಶಂಕರ ಬಿರಾದಾರ, ಶಿವಾನಂದ ಅಣಜಗಿ, ವೇದಕುಮಾರ ಪ್ರಜಾಪತಿ,ಮಡಿವಾಳಪ್ಪ ನಾಗರಹಳ್ಳಿ ಇದ್ದರು.