Advertisement

ನೀರಿನಾಳದಿಂದ ಭಾಷಣ

01:20 AM Apr 15, 2019 | Sriram |

ಡೆಸ್ರೋಚಸ್‌ ದ್ವೀಪ: ಸಮುದ್ರಗಳನ್ನು ಉಳಿಸುವ ಅಭಿಯಾನದ ಹಿನ್ನೆಲೆಯಲ್ಲಿ ಸೀಷೆಲ್ಸ್‌ ಅಧ್ಯಕ್ಷ ಡ್ಯಾನಿ ಫಾರೆ ರವಿವಾರ ಹಿಂದೂ ಮಹಾಸಾಗರದಲ್ಲಿ 400 ಅಡಿ ಆಳದಲ್ಲಿ ಸಬ್‌ಮರೀನ್‌ನಲ್ಲಿ ಕುಳಿತು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

Advertisement

ನಮಗೆ ನಮ್ಮ ಸಮುದ್ರದಾಳಕ್ಕಿಂತ ಬಾಹ್ಯಾಕಾಶದ ಬಗ್ಗೆ ಹೆಚ್ಚು ತಿಳಿವಳಿಕೆ ಇದೆ. ಆ ಬಗ್ಗೆ ನಾವು ಹೆಚ್ಚು ಸಂಶೋಧನೆ ನಡೆಸಿದ್ದೇವೆ. ಆದರೆ ಸಮುದ್ರದಾಳದ ಬಗ್ಗೆ ನಾವು ತಿಳಿಯಬೇಕಿರುವುದು ಇನ್ನೂ ಬಹಳಷ್ಟಿದೆ ಎಂದಿದ್ದಾರೆ.

ಬ್ರಿಟನ್‌ ನೇತೃತ್ವದಲ್ಲಿ ಹಿಂದೂ ಮಹಾಸಾಗರದ ಆಳದ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೂ ಅವರು ಚಾಲನೆ ನೀಡಿದ್ದಾರೆ. ಹವಾಮಾನ ವೈಪರೀತ್ಯದಿಂದ ಸೀಷೆಲ್ಸ್‌ನಂತಹ ಸಣ್ಣ ದ್ವೀಪಗಳು ಬಾಧೆಗೆ ಒಳಪಡುತ್ತವೆ ಎಂದೂ ಹೇಳಿದ್ದಾರೆ. ಭೂ ಸವಕಳಿ, ಹವಳದ ದಂಡೆಗಳು ನಾಶವಾಗುವುದು ಹಾಗೂ ವಾತಾವರಣದಲ್ಲಿ ವೈಪರೀತ್ಯ ಉಂಟಾಗುವುದು ಸಣ್ಣ ದ್ವೀಪಗಳಿಗೆ ಮಾರಕ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next