Advertisement

ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನ ನಡಿಗ

12:30 PM Dec 10, 2018 | |

ಬೆಂಗಳೂರು: ಕರ್ನಾಟಕ ಟ್ರಾನ್ಸ್‌ಜೆಂಡರ್‌ ನೀತಿ-2017 ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾನುವಾರ ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆ ನಗರದಲ್ಲಿ ಸ್ವಾಭಿಮಾನ ನಡಿಗೆ ಆಯೋಜಿಸಿತ್ತು.

Advertisement

“ನಮ್ಮ ಪ್ರೈಡ್‌ ಮತ್ತು ಕರ್ನಾಟಕ ಕ್ವೀರ್‌ ಹಬ್ಬ-2018′ ಅಂಗವಾಗಿ ನಗರದ ತುಳಸಿ ಪಾರ್ಕ್‌ನಿಂದ ಹೊರಟ ಈ ಸ್ವಾಭಿಮಾನ ಮೆರವಣಿಗೆ ಪುರಭವನದಲ್ಲಿ ಸಮಾವೇಶಗೊಂಡಿತು. ಅಲ್ಲಿ ನೂರಾರು ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು, ಬೆಂಬಲಿಗರು ಜಮಾವಣೆಗೊಂಡರು. ಸರ್ವೋತ್ಛ ನ್ಯಾಯಾಲಯದ ತೀರ್ಪು ಅನುಷ್ಠಾನಗೊಳಿಸಬೇಕು. ಇತರರಂತೆ ಈ ಸಮುದಾಯವನ್ನೂ ಸಮಾನ ಗೌರವದಿಂದ ಕಾಣಬೇಕು. ಕೇಂದ್ರ ಮತ್ತು ರಾಜ್ಯ ಕಲ್ಯಾಣ ಸಮಿತಿಗಳನ್ನು ರಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ಟ್ರಾನ್ಸ್‌ಜೆಂಡರ್‌ ನೀತಿಯನ್ನು ಶೀಘ್ರ ಜಾರಿಗೊಳಿಸಬೇಕು. ಈ ಮೂಲಕ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ತಾರತಮ್ಯದ ವಿರುದ್ಧ ಹೋರಾಡಲು ಕಾನೂನಿನ ಬಲ ತುಂಬಬೇಕು. ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2016 ಅನ್ನು ಪರಿಶೀಲನೆಗೊಳಪಡಿಸಬೇಕು. ಸಮುದಾಯದ ಮೇಲೆ ನಡೆಯುತ್ತ ಎಲ್ಲ ರೀತಿಯ ದೌರ್ಜನ್ಯಗಳ ತಡೆಗೆ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು. 

ಏನಿದು ನಮ್ಮ ಪ್ರೈಡ್‌?: ನಮ್ಮ ಪ್ರೈಡ್‌ ಎನ್ನುವುದು ಲೈಂಗಿಕ ಅಲ್ಪಸಂಖ್ಯಾತರ ವಾರ್ಷಿಕ ಸ್ವಾಭಿಮಾನ ಮೆರವಣಿಗೆ. ಹಕ್ಕೊತ್ತಾಯಗಳಿಗಾಗಿ 2008ರಿಂದ ಇದು ನಡೆಯುತ್ತಿದ್ದು, ಸಾಮಾನ್ಯವಾಗಿ ಇದು ಪ್ರತಿ ವರ್ಷ ನವೆಂಬರ್‌ನಲ್ಲಿ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next