Advertisement

ಬಸ್‌ನಲ್ಲಿ ಲೈಂಗಿಕ ಕಿರುಕುಳ: ಟೆಕ್ಕಿ ಸೆರೆ

11:37 AM May 12, 2017 | Team Udayavani |

ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಟಿಕ್ಕಿ ವಿರುದ್ಧ ಸಂತ್ರಸ್ತೆ Know your police station ಮೊಬೈಲ್‌ ಆ್ಯಪ್‌ನಲ್ಲಿ ದೂರು ನೀಡಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ ಪಿಂಕ್‌ ಹೊಯ್ಸಳ ಸಿಬ್ಬಂದಿ ವೋಲ್ವೋ ಬಸ್‌ನ್ನು ಹಿಂಬಾಲಿಸಿ ಕೆಲವೇ ಕ್ಷಣಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. 

Advertisement

ಬನಶಂಕರಿಯ ಮಧುಸೂದನ್‌ (47) ಬಂಧಿತ ಟೆಕ್ಕಿ. ಆಂಧ್ರಪ್ರದೇಶ ಮೂಲದ ಮಧುಸೂದನ್‌ ನಗರದ ಸಾಫ್ಟ್ ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದು, ಬನಶಂಕರಿ ಯಲ್ಲಿ ನೆಲೆಸಿದ್ದಾನೆ. ಮೆ 10ರಂದು ರಾತ್ರಿ 11 ಗಂಟೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಇಬ್ಲೂರು ವರ್ತುಲ ರಸ್ತೆಯಲ್ಲಿ ಪ್ರಯಾಣಿಸುವಾಗ ಮುಂದಿನ ಸೀಟ್‌ನಲ್ಲಿ ಕುಳಿತ್ತಿದ್ದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ  Know your police station ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪಿಂಕ್‌ ಹೊಯ್ಸಳ ಸಿಬ್ಬಂದಿ ಮುಖ್ಯಪೇದೆ ಮಹೇಶ್‌, ಮಹಿಳಾ ಪೇದೆ ಪವಿತ್ರಾಗೆ ದೂರು ರವಾನೆಯಾಗಿದೆ.

ನಂತರ ವೋಲ್ವೋ ಬಸ್‌ನ್ನು ಹಿಂಬಾಲಿಸಿ ನಿಲ್ಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಈ ಹಿಂದೆಯೂ ಕಿರುಕುಳ ಕೊಟ್ಟಿರುವ ಮಾಹಿತಿ ಲಭ್ಯವಾಗಿದೆ. ಫೋಟೋ ಸಹ ತೆಗೆದಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬೆಳ್ಳಂದೂರು ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next