Advertisement

ಲೈಂಗಿಕ ದೌರ್ಜನ್ಯ ಎಸಗಿದವನ ಸೆರೆ

12:01 PM Jul 29, 2018 | Team Udayavani |

ಬೆಂಗಳೂರು: ಬಾರ್‌ಗರ್ಲ್ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಸ್ಟಿನ್‌ ಟೌನ್‌ ನಿವಾಸಿ ಜಾವೇದ್‌ (28) ಬಂಧಿತ ಆರೋಪಿ. ಆರೋಪಿ ತನಗೆ ಪರಿಚಯವಿರುವ ಮುಂಬೈ ಮೂಲದ ಬಾರ್‌ಗರ್ಲ್ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಗರದ ಕ್ಲಬ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಜಾವೇದ್‌, ತನ್ನ ಮನೆ ಮುಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 22 ವರ್ಷದ ಬಾರ್‌ ಗರ್ಲ್ ಅನ್ನು ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಮಧ್ಯೆ ಯುವತಿ ನಗರದಲ್ಲಿದ್ದ ಕೆಲಸ ತೊರೆದು ಮುಂಬೈಗೆ ಹೋಗಿದ್ದರು.

ಜು.27ರಂದು ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿದ್ದ ವಸ್ತುಗಳನ್ನು ಕೊಂಡೊಯ್ಯಲು ನಗರಕ್ಕೆ ಬಂದಿದ್ದರು. ಇದನ್ನು ಗಮನಿಸಿದ ಆರೋಪಿ, ಮಾತನಾಡಿಸುವ ನೆಪದಲ್ಲಿ ಈಕೆಯ ಮನೆಗೆ ಬಂದು, ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದರು ಎಂದು ಅಶೋಕನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next