Advertisement

ಲೈಂಗಿಕ ಕಿರುಕುಳ: ಮಾವ, ಅತ್ತೆಯನ್ನೇ ಕೊಂದ ಸೊಸೆ

11:17 PM Aug 29, 2019 | Lakshmi GovindaRaj |

ಬಾಗಲಕೋಟೆ: ಲೈಂಗಿಕ ಕಿರುಕುಳ ನೀಡಿದ ಮಾವನ ವಿರುದ್ಧ ಆಕ್ರೋಶಗೊಂಡ ಸೊಸೆ, ರಾಡ್‌ನಿಂದ ಮಾವ ಹಾಗೂ ಬಿಡಿಸಲು ಬಂದ ಅತ್ತೆಯನ್ನೇ ಹೊಡೆದು ಕೊಲೆ ಮಾಡಿದ ಘಟನೆ ಜಮಖಂಡಿ ತಾಲೂಕಿನ ಜಂಬಗಿ ಕೆ.ಡಿ. ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಸಿದರಾಯ ಮಲ್ಲೇಶನವರ (58) ಹಾಗೂ ಕಲಾವತಿ ಸಿದರಾಯ ಮಲ್ಲೇಶನವರ (45) ಮೃತರು. ಸೊಸೆ ಗೀತಾ ಮಲ್ಲೇಶನವರಗೆ ಮಾವ ಸಿದರಾಯ, ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

Advertisement

ಇದರಿಂದ ಬೇಸತ್ತ ಸೊಸೆ, ಕಬ್ಬಿಣದ ರಾಡ್‌ನಿಂದ ಮಾವನಿಗೆ ಹೊಡೆಯುತ್ತಿದ್ದಳು. ಈ ವೇಳೆ, ಬಿಡಿಸಲು ಬಂದ ಅತ್ತೆ ಕಲಾವತಿಗೂ ಅದೇ ರಾಡ್‌ನಿಂದ ಹೊಡೆದಿದ್ದು, ಇಬ್ಬರಿಗೂ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಬಳಿಕ ಗೀತಾ, ತನ್ನ ಪತಿ ಜೊತೆ ಮಾವ ಸಿದರಾಯನ ಶವವನ್ನು ಚೀಲದಲ್ಲಿ ಹಾಕಿಕೊಂಡು, ಸಾವಳಗಿ ಪೊಲೀಸ್‌ ಠಾಣೆಗೆ ತಂದು ಶರಣಾಗಿದ್ದಾಳೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next