Advertisement

ದಕ್ಷಿಣದ ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳ ದೂರು?

10:40 AM Feb 27, 2018 | Team Udayavani |

ಹೊಸದಿಲ್ಲಿ: ದಕ್ಷಿಣ ಭಾರತದ ರಾಜ್ಯವೊಂದರ ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದ್ದು, ಗೃಹ ಸಚಿವಾಲಯಕ್ಕೆ ದೂರು ದಾಖಲಾಗಿದೆ. ಸಚಿವಾಲಯವು ಈ ಕುರಿತು ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿರುವ ಗೃಹ ಇಲಾಖೆ, ಅಂಥ ಯಾವುದೇ ಬೆಳವಣಿಗೆಗಳ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದಿದೆ.

Advertisement

ರಾಜಭವನದಲ್ಲೇ ರಾಜ್ಯಪಾಲರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ರಾಜಭವನದ ಸಿಬಂದಿಯೊಬ್ಬರು ದೂರು ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ, ಈ ಕುರಿತು ತನಿಖೆ ನಡೆಸಿ, ಆರೋಪ ನಿಜವಾದಲ್ಲಿ ರಾಜ್ಯಪಾಲರ ರಾಜೀನಾಮೆ ಕೇಳಲು ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ, ಆ ರಾಜ್ಯಪಾಲರ ಹೆಸರನ್ನು ಇದುವರೆಗೆ ಬಹಿರಂಗಪಡಿಸಿಲ್ಲ. ಏಕೆಂದರೆ, ಆರೋಪ ಎದುರಿಸುತ್ತಿರುವ ರಾಜ್ಯಪಾಲರು ರಾಜ ಕೀಯವಾಗಿ ಮಹತ್ವದ ರಾಜ್ಯಕ್ಕೆ ಸೇರಿದವರು ಎನ್ನಲಾಗಿದೆ.

ಆದರೆ ಈ ಬಗ್ಗೆ ಪ್ರಶ್ನಿಸಿದಾಗ ಗೃಹ ಇಲಾಖೆ, ಅಂಥ ಯಾವುದೇ ದೂರಿನ ಬಗ್ಗೆ ಗೊತ್ತಿಲ್ಲ ಎಂದಿದೆ. ಕಳೆದ ವರ್ಷವಷ್ಟೇ ಲೈಂಗಿಕ ದುರ್ವರ್ತನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೇಘಾಲಯ ರಾಜ್ಯಪಾಲ ವಿ. ಷಣ್ಮುಗನಾಥನ್‌ ರಾಜೀನಾಮೆ ನೀಡಿದ್ದರು. ಇವರ ವಿರುದ್ಧ ಸುಮಾರು 100 ಮಂದಿ ಸಿಬಂದಿ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next