Advertisement

ಲೈಂಗಿಕ ಕಿರುಕುಳ ಆರೋಪ: ವಕೀಲರಿಂದ ಸ್ಪಷ್ಟನೆ ಕೇಳಿದ ಸಿಜೆಐ

12:52 AM Apr 24, 2019 | Team Udayavani |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುವ ಮೂಲಕ ಅವರು ರಾಜೀನಾಮೆ ನೀಡುವಂತೆ ಮಾಡುವ ಸಂಚು ಹೂಡಲಾಗಿದೆ ಎಂದು ಹೇಳಿಕೆ ನೀಡಿರುವ ವಕೀಲ ಉತ್ಸವ್‌ ಸಿಂಗ್‌ ಬೇನ್ಸ್‌ಗೆ ನೋಟಿಸ್‌ ನೀಡಲಾಗಿದ್ದು, ಈ ಆರೋಪಕ್ಕೆ ಸಂಬಂಧಿಸಿ ವಿವರಣೆ ನೀಡುವಂತೆ ಕೋರಲಾಗಿದೆ. ಸಿಜೆಐ ರಂಜನ್‌ ಗೊಗೋಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆಯ ಪರ ವಕಾಲತ್ತು ವಹಿಸಿದರೆ 1.5 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎಂದು ಸಿಂಗ್‌ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾ. ಅರುಣ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠವು ಈ ನೋಟಿಸ್‌ ನೀಡಿದೆ. ಪ್ರಕರಣದ ವಿಚಾರಣೆ ಬುಧವಾರ ಬೆಳಗ್ಗೆ 10.30 ಕ್ಕೆ ನಿಗದಿಯಾಗಿದೆ.

Advertisement

ಲಂಚದ ಆಮಿಷ ಒಡ್ಡುವ ಕೆಲವು ಫಿಕ್ಸರುಗಳು, ಸಿಜೆಐ ವಿರುದ್ಧ ಸಂಚು ಹೂಡಿದ್ದಾರೆ. ಲಂಚದ ಆಮಿಷ ಒಡ್ಡುವವರ ವಿರುದ್ಧ ಮುಖ್ಯನ್ಯಾಯಮೂರ್ತಿಗಳು ಕಠಿಣ ಕ್ರಮ ಕೈಗೊಂಡಿದ್ದರಿಂದಾಗಿ ಈ ರೀತಿಯ ಸಂಚು ಹೂಡಲಾಗಿದೆ ಎಂದು ಉತ್ಸವ್‌ ಆರೋಪಿಸಿದ್ದಾರೆ.

ತಮ್ಮ ವಿರುದ್ಧವೇ ದಾಖಲಾದ ಲೈಂಗಿಕ ದೌರ್ಜನ್ಯದ ಪ್ರಕರಣದ ವಿಚಾರಣೆಯನ್ನು ತಾವೇ ನಡೆಸುವುದು ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ತಪ್ಪು ಎಂದು ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಹೇಳಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ನಾನು ಮಾತನಾಡಲಾರೆ. ಯಾಕೆಂದರೆ ಅದರ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next