Advertisement

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ

01:34 AM Apr 21, 2019 | Team Udayavani |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ಮುಖ್ಯ ನ್ಯಾ| ರಂಜನ್‌ ಗೊಗೊಯ್‌ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ಘಟನೆ ನಡೆದಿದೆ. ವಿಚಾರ ಬಹಿರಂಗ ವಾಗುತ್ತಿದ್ದಂತೆ ಸಿಜೆಐ ಗೊಗೊಯ್‌ ಅವರು ತುರ್ತು ವಿಶೇಷ ಕಲಾಪ ನಡೆಸಿ ದ್ದಲ್ಲದೆ, ತಮ್ಮ ವಿರುದ್ಧದ ಆರೋಪವು ನಂಬಲಸಾಧ್ಯವಾದದ್ದು ಎಂದಿದ್ದಾರೆ. ಅಲ್ಲದೆ ಇದರ ಹಿಂದೆ ಅತಿದೊಡ್ಡ
ಷಡ್ಯಂತ್ರ ಅಡಗಿದ್ದು, ನ್ಯಾಯಾಂಗ ಹಿಂದೆಂದೂ ಕಂಡಿರದಂಥ ಅಪಾಯದಲ್ಲಿ ಸಿಲುಕಿದೆ ಎಂದಿದ್ದಾರೆ.

Advertisement

ದಿಲ್ಲಿಯಲ್ಲಿರುವ ನ್ಯಾ| ಗೊಗೊಯ್‌ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ಅಕ್ಟೋಬರ್‌ನಲ್ಲಿ ನಡೆದಿದೆ ಎನ್ನಲಾದ ಪ್ರಕರಣದ ಆರೋಪಗಳನ್ನು ಸಿಜೆಐ ಮೇಲೆ ಹೊರಿಸಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಸು. ಕೋರ್ಟ್‌ನ 22 ನ್ಯಾಯಾಧೀಶರಿಗೆ ಅಫಿದವಿತ್‌ ಪ್ರತಿ ರವಾನಿಸಿದ್ದಾರೆ. ಆರೋಪವನ್ನು ನಾಲ್ಕು ವೆಬ್‌ ಪೋರ್ಟಲ್‌ಗ‌ಳು ವಿಸ್ತೃತವಾಗಿ ಪ್ರಕಟಿಸಿದ ಕಾರಣ ಪ್ರಕರಣ ಬಹಿರಂಗವಾಗಿದೆ.

ವಿಶೇಷ ಕಲಾಪ
ಆರೋಪಕ್ಕೆ ಸಂಬಂಧಿಸಿದ ಸುದ್ದಿ ಪ್ರಕಟವಾಗುತ್ತಿದ್ದಂತೆ ಶನಿವಾರ ಸಿಜೆಐ ಗೊಗೊಯ್‌ ಕೋರ್ಟ್‌ ನಂ.1ರಲ್ಲಿ ತರಾತುರಿಯ ವಿಶೇಷ ಕಲಾಪ ನಡೆಸಿ
ದ್ದಾರೆ. ವಿಶೇಷ ಪೀಠದಲ್ಲಿ ಸಿಜೆಐ ಗೊಗೊಯ್‌, ನ್ಯಾ| ಅರುಣ್‌ ಮಿಶ್ರಾ ಮತ್ತು ನ್ಯಾ| ಸಂಜೀವ್‌ ಖನ್ನಾ ಅವರಿದ್ದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಜನ ಸಾಮಾನ್ಯರು ನಂಬಿಕೆ ಕಳೆದುಕೊಳ್ಳ ಬೇಕು ಎಂಬ ಉದ್ದೇಶದಿಂದ ಈ ರೀತಿಯ ವಿವಾದ ಹುಟ್ಟು ಹಾಕ ಲಾಗಿದೆ. ಇದರ ಹಿಂದೆ ದೊಡ್ಡ ಸಂಚು ಅಡಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಪೀಠದ ನೇತೃತ್ವವನ್ನು ನ್ಯಾ| ಗೊಗೊಯ್‌ ಅವರೇ ವಹಿಸಿದ್ದರೂ “ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ನ್ಯಾಯಾಂಗ ಆದೇಶ ಹೊರಡಿಸುವುದಿದ್ದರೆ ಅದು ನ್ಯಾಯಪೀಠದ ಉಳಿದಿಬ್ಬರು ನ್ಯಾಯ ಮೂರ್ತಿಗಳಿಗೆ ಬಿಟ್ಟದ್ದು’ ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ನ್ಯಾ| ಮಿಶ್ರಾ ಮತ್ತು ನ್ಯಾ| ಖನ್ನಾ, “ಸದ್ಯಕ್ಕೆ ಯಾವುದೇ ಆದೇಶ ಇಲ್ಲ. ಸುದ್ದಿ ಪ್ರಕಟಿಸುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟದ್ದು’ ಎಂದಿದ್ದಾರೆ. ಪ್ರಕರಣ ಸಂಬಂಧ ಮಾಧ್ಯಮಗಳಿಗೆ ನಿರ್ಬಂಧ ವಿಧಿಸದ ನ್ಯಾಯಪೀಠ, ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ, ಜವಾಬ್ದಾರಿ ಯುತವಾಗಿ ವರದಿ ಮಾಡಿ ಎಂದಷ್ಟೇ ಸೂಚಿಸಿದೆ.

ಎಜಿ ಇದ್ದದ್ದು ಏಕೆ?
ಸಿಜೆಐ ವಿರುದ್ಧದ ಆರೋಪದ ಕುರಿತ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಕೆ.ಸಿ. ವೇಣುಗೋಪಾಲ್‌ ಹಾಜ ರಾದದ್ದೇಕೆ ಎಂದು ವಕೀಲೆ ಇಂದಿರಾ ಜೈಸಿಂಗ್‌ ಪ್ರಶ್ನಿಸಿದ್ದಾರೆ. ಪ್ರಕರಣಕ್ಕೂ ಸರಕಾರಕ್ಕೂ ಸಂಬಂಧವೇ ಇಲ್ಲದಿರುವಾಗ ಎಜಿ ಏಕೆ ಹಾಜರಾದರು ಎಂದು ಪ್ರಶ್ನಿಸಿರುವ ಅವರು, ಸರಕಾರವು ಸಿಜೆಐ ಗೊಗೊಯ್‌ರನ್ನು ಸಮರ್ಥಿಸಿಕೊಂಡಿದೆ. ಹೀಗಾಗಿ ಸರಕಾರಕ್ಕೆ ಸಂಬಂಧಿಸಿದ ವಿಚಾರಣೆಗಳಿಂದ ಸಿಜೆಐ ಹಿಂದೆ ಸರಿಯಬೇಕು ಎಂದೂ ಆಗ್ರಹಿಸಿದ್ದಾರೆ.

Advertisement

ಲೈಂಗಿಕ ಕಿರುಕುಳ ಆರೋಪ ವರದಿ ಮಾಡಿರುವ ಸೊðàಲ್‌, ದಿ ಲೀಫ್ಲೆಟ್‌, ಕಾರವಾನ್‌ ಮತ್ತು ದಿ ವೈರ್‌ ನ್ಯೂಸ್‌ ಪೋರ್ಟಲ್‌ಗ‌ಳ ಪೈಕಿ “ಲೀಫ್ಲೆಟ್‌’ ಪೋರ್ಟಲ್‌ ಇಂದಿರಾ ಜೈಸಿಂಗ್‌ ಅವರಿಗೆ ಸೇರಿದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next