Advertisement

Vitla: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಪರಾರಿ

09:00 PM Aug 13, 2024 | Team Udayavani |

ವಿಟ್ಲ: ಅಂಗಡಿಯೊಂದಕ್ಕೆ ವಸ್ತು ಖರೀದಿಗೆ ಬಂದ ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.

Advertisement

ಕೇಪು ಗ್ರಾಮದ ಅಂಗಡಿಯ ಮಾಲಕ ಅಶ್ರಫ್‌ (49) ಆರೋಪಿ.

ಈತ ನಾಲ್ಕು ಮಕ್ಕಳ ತಂದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಜನರಲ್‌ ಸ್ಟೋರ್‌ಗೆ ವಸ್ತು ಖರೀದಿಗೆ ಬಾಲಕಿ ಆಗಮಿಸಿದ್ದು, ಈ ಸಂದರ್ಭ ಬಾಲಕಿಯ ಜತೆಗೆ ಆರೋಪಿ ಅಸಭ್ಯವಾಗಿ ವರ್ತಿಸಿದ್ದ. ಇದನ್ನು ಬಾಲಕಿಯು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ವಿಟ್ಲ ಠಾಣೆಗೆ ಎರಡು ದಿನಗಳ ಹಿಂದೆ ಪೋಷಕರು ದೂರು ನೀಡಿದ್ದರು. ತನಿಖೆಗೆ ಮುಂದಾದ ಪೊಲೀಸರು ಅಂಗಡಿಯಲ್ಲಿರುವ ಸಿಸಿ ಕೆಮರಾವನ್ನು ಪರಿಶೀಲಿಸಿದ್ದು, ಬಾಲಕಿ ಹೇಳಿದ ರೀತಿಯಲ್ಲಿ ದೌರ್ಜನ್ಯ ಎಸಗಿರುವುದು ಸಿಸಿ ಕೆಮರಾ ದೃಶ್ಯಾವಳಿಯಲ್ಲಿ ಕಂಡುಬಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next