Advertisement

Sexual Assault: ತೀರ್ಪು ಎತ್ತಿಹಿಡಿದ ಮದ್ರಾಸ್‌ ಹೈಕೋರ್ಟ್‌

12:28 AM Sep 30, 2023 | Team Udayavani |

ಚೆನ್ನೈ: ತಮಿಳುನಾಡಿನ ವಚತಿ ಗ್ರಾಮದಲ್ಲಿ ಶ್ರೀಗಂಧ ಕಳ್ಳಸಾಗಣೆ ಶೋಧ ಸಂದರ್ಭದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಬುಡಕಟ್ಟು ಸಮುದಾಯಗಳ ಜನರ ಮೇಲೆ ಹಲ್ಲೆ ನಡೆಸಿದ್ದ 215 ಮಂದಿ ಯನ್ನು ದೋಷಿಗಳು ಎಂದು ತೀರ್ಪಿತ್ತಿದ್ದ ಕೆಳನ್ಯಾಯಾಲಯದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಎತ್ತಿ ಹಿಡಿದಿದೆ. ದೋಷಿಗಳ ಪೈಕಿ ಅರಣ್ಯ ಸಿಬಂದಿ ಹಾಗೂ ಪೊಲೀಸ್‌ ಸಿಬಂದಿಯೂ ಸೇರಿದ್ದಾರೆ.

Advertisement

ಧರ್ಮಪುರಿಯ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ 215 ಮಂದಿಯನ್ನು ದೋಷಿಗಳೆಂದು ಪರಿಗಣಿಸಿ ಅವರಿಗೆ 1 ರಿಂದ 10 ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು.

ನ್ಯಾಯಮೂರ್ತಿ ಪಿ.ವೆಲ್‌ವುುರುಗನ್‌ ಅವರು ಆ ಅರ್ಜಿಗಳನ್ನೆಲ್ಲ ವಜಾಗೊಳಿಸಿ, ಕೆಳ ನ್ಯಾಯಾಲಯದ ತೀರ್ಪಿಗೆ ಸಮ್ಮತಿಸಿದ್ದಾರೆ. ಅಲ್ಲದೇ ಕಿರುಕುಳಕ್ಕೆ ಒಳಗಾಗಿರುವ 18 ಮಹಿಳಾ ಸಂತ್ರಸ್ತೆಯರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ನೀಡುವಂತೆಯೂ ಆದೇಶಿಸಿ, ಅತ್ಯಾಚಾರ ಎಸಗಿರುವ ಆರೋಪಿಗಳಿಂದ 5 ಲಕ್ಷ ರೂ.ಗಳನ್ನು ವಸೂಲಿ ಮಾಡುವಂತೆಯೂ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next