Advertisement

ಹೊಲಿಗೆ ಕೆಲಸ ಹೊಟ್ಟೆ ತುಂಬಿಸಿತು…

06:44 PM Mar 22, 2021 | Team Udayavani |

ಕೋವಿಡ್ ಸಮಯ ನಮಗೂ ಸಹ ಸಾಕಷ್ಟು ತೊಂದರೆಯಾಯಿತು. ನಮ್ಮದು ಐಸ್‌ ಕ್ರೀಮ್‌ ಮಾಡಿ ಮಾರುವ ಬಿಸಿನೆಸ್‌ ಆದ ಕಾರಣ,ಕೋವಿಡ್ ಕಳೆದ ನಂತರವೂ ನಮ್ಮ ಕಷ್ಟಗಳ ಸರಮಾಲೆ ಮುಂದುವರಿಯಿತು.

Advertisement

ಇದರ ನಡುವೆ,ನನ್ನ ಯಜಮಾನರಿಗೆ ಅಪಘಾತವಾಗಿ ಅವರ ಚಿಕಿತ್ಸೆಗೆ ಸಾಕಷ್ಟು ಹಣ ಬೇಕಾಯಿತು. ಮಗಳು 10ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.ಅವಳ ಮುಂದಿನ ಶಿಕ್ಷಣಕ್ಕೆ ಹಣ ಹೊಂದಿಸಲೇಬೇಕಿತ್ತು. ಇಂಥ ಸಂದರ್ಭದಲ್ಲಿ ನನ್ನ ಕೈ ಹಿಡಿದದ್ದು ಟೈಲರಿಂಗ್‌ ವಿದ್ಯೆ ಮತ್ತು ಮಹಿಳಾಮಾರುಕಟ್ಟೆ- ಹೀಗೆನ್ನುತ್ತಲೇ ತಮ್ಮಹೊಸ ಸಾಹಸದ ಬಗ್ಗೆ ಹೇಳುತ್ತಾ ಹೋದರು ಛಾಯಾ ಮಹಾಲೆ.

ಚಿಕ್ಕ ವಯಸ್ಸಿನಿಂದಲೇ ಟೈಲರಿಂಗ್‌ಮಾಡಿ ಗೊತ್ತಿತ್ತು. ಐಸ್‌ ಕ್ರೀಮ್‌ಬಿಸಿನೆಸ್‌ ಮುಚ್ಚಿಹೋದ ಕಾರಣ,ಮನೆಯ ಸುತ್ತಮುತ್ತಲಿನವರಿಗೆ ಸೀರೆ,ಬಟ್ಟೆಯ ಕವರ್‌ಗಳನ್ನು ಹೊಲೆದುಕೊಡಲು ಶುರು ಮಾಡಿದೆ. ಅಷ್ಟರಲ್ಲಿಸ್ನೇಹಿತೆಯೊಬ್ಬರು ನನ್ನನ್ನು ಮಹಿಳಾಮಾರುಕಟ್ಟೆ ಗುಂಪಿಗೆ ಸೇರಿಸಿದರು. ನಾನು ಹೊಲೆದಿದ್ದ 3 ಸೀರೆ ಕವರ್‌ಗಳ ಫೋಟೋ ತೆಗೆದು ಆ ಗುಂಪಿನಲ್ಲಿ ಹಾಕಿದೆ. ನೋಡು ನೋಡುತ್ತಿದಂತೆಯೇ ಆರ್ಡರ್‌ಗಳು ಬರಲು ಪ್ರಾರಂಭವಾದವು. 25 ಸೀರೆ ಕವರ್‌ಗಳನ್ನು ಹೊಲೆದುಕೊಡುವಂತೆ ಕೇಳಿದಾಗ, ಹಗಲು ರಾತ್ರಿ ಹೊಲೆದು, 2 ದಿನಗಳಲ್ಲಿಯೇ ಕೊಟ್ಟೆ. ಅವರು ಹಾಕಿದ ಪ್ರೋತ್ಸಾಹದಾಯಕ ವಿಮರ್ಶೆಯಿಂದ ನನಗೆ ಮೊದಲ ತಿಂಗಳಲ್ಲೇ, 1000 ಆರ್ಡರ್ಸ್‌ ಬಂದವು. ನಾನು ಒಬ್ಬಳೇ ಹೊಲೆಯುತ್ತಿದ್ದ ಕಾರಣ, ಎಷ್ಟೋ ರಾತ್ರಿ 3 ಗಂಟೆಯವರೆಗೂ ಹೊಲೆದು ಆರ್ಡರ್ಸ್‌ ಪೂರೈಸಿದ್ದಿದೆ.

ಮಹಿಳಾ ಮಾರುಕಟ್ಟೆಯ ಕಾರಣದಿಂದ ನಾನು ಹೊಲೆದ ಸೀರೆ ಕವರ್‌ಗಳು ಮತ್ತು ಚೀಲಗಳು ಅಮೇರಿಕಾ, ಜಪಾನ್‌,ಇಂಗ್ಲೆಂಡ್‌, ಜರ್ಮನಿಗೆ ಪಯಣ ಬೆಳೆಸಿವೆ. ಕೆಲವೇ ವರ್ಷಗಳ ಹಿಂದೆರಾತ್ರಿ 3 ಗಂಟೆಯ ತನಕ ಒಬ್ಬಳೇಕೂತು ಹೊಲೆಯುತ್ತಿದ್ದ ನಾನು,ಇಂದು 4 ಜನರಿಗೆ ಕೆಲಸ ಕೊಟ್ಟು, ಅವರಿಗೆ ಸಂಬಳ ಕೊಡುವ ಮಟ್ಟಕ್ಕೆ ಬೆಳೆದಿದ್ದೇನೆಂದರೆ ಅದಕ್ಕೆ ನನ್ನಬೆನ್ನೆಲುಬಾಗಿ ನಿಂತು, ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ ನನ್ನಕುಟುಂಬದವರು, ನನ್ನ ಮಹಿಳಾಮಾರುಕಟ್ಟೆ, ಅದರ ಅಡ್ಮಿನ್‌ಗಳು ಮತ್ತು ನನ್ನ ಮೇಲೆ ನಂಬಿಕೆಯಿಟ್ಟ ಗ್ರಾಹಕರು. ಆನ್‌ಲೈನ್‌ ವ್ಯಾಪಾರದಲ್ಲಿ ಮೋಸವಾಗುತ್ತದೆ ಎಂದು ಎಷ್ಟೋಬಾರಿ ಕೇಳಿದ್ದೆ, ಆದರೆ, ನನಗೆ ಸಿಕ್ಕ ಗ್ರಾಹಕರಲ್ಲಿ ಯಾರೊಬ್ಬರೂ ಸಹನನಗೆ ಒಂದೇ ಒಂದು ಪೈಸೆಯ ಮೋಸ ಮಾಡಿಲ್ಲ. ಬದಲಾಗಿ, ಸರಿಯಾದ ಸಮಯಕ್ಕೆ ಹಣ ಕಳುಹಿಸಿದ್ದಾರೆ.

ಮೂರು ಸೀರೆ ಕವರ್‌ಗಳಮಾರಾಟದಿಂದ ಪ್ರಾರಂಭವಾದ ನನ್ನ ಗೃಹ ಉದ್ಯಮದ ಪಯಣ, ಇಂದು ಮುಂದಿನ ಜೂನ್‌ ವರೆಗೆ ಬುಕಿಂಗ್ಸ್ ಇರುವ ಮಟ್ಟಕ್ಕೆ ಬೆಳೆದಿದೆ.

Advertisement

 

-ರೋಹಿಣಿ ರಾಮ್‌ ಶಶಿಧರ್

Advertisement

Udayavani is now on Telegram. Click here to join our channel and stay updated with the latest news.

Next