Advertisement

ರೈತರ ಕಬ್ಬಿನ ಗದ್ದೆಗೆ ನುಗ್ಗಿದ ಚರಂಡಿ ನೀರು ಖಾಲಿ, ನಿರಾಳರಾದ ರೈತರು

07:38 PM Apr 18, 2022 | Team Udayavani |

ರಬಕವಿ-ಬನಹಟ್ಟಿ: ಕಳೆದ ಒಂದು ತಿಂಗಳಿಂದ ನಗರಸಭೆ ವ್ಯಾಪ್ತಿಯ ರಾಂಪುರ ನರದ ರೈತ ತಮ್ಮಣ್ಣಿ ಮಾಯಣ್ಣನವರ ಕಬ್ಬಿನ ಗದ್ದೆಗೆ ರಾಂಪುರ ನಗರದ ಜನರು ಬಳಸಿದ ಚರಂಡಿ ನೀರು ಹರಿದು ಹೋಗದೆ ಗದ್ದೆಯಲ್ಲಿಯೇ ಸಂಗ್ರಹವಾಗಿ ಎರಡು ಎಕರೆ ಕಬ್ಬು ಸಂಪೂರ್ಣ ನಾಶವಾಗುತ್ತಿದೆ ಎಂಬ ಸುದ್ದಿಯನ್ನು ಏ.4 ರಂದು ಉದಯವಾಣಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಸಂಬಂಧಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ಮೊದಲಿದ್ದಂತೆ ಚರಂಡಿ ನೀರು ಹರಿದು ಹೋಗಲು ಕಾಲುವೆ ತೋಡಿ ಸರಿಪಡಿಸಿದ್ದಾರೆ ಇದರಿಂದ ರೈತ ತಮ್ಮಣ್ಣಿ ನಿರಾಳರಾಗಿದ್ದಾರೆ.

Advertisement

ಘಟನೆ ವಿವರ; ರಾಂಪುರ ನಗರ ರೈತ ತಮ್ಮಣ್ಣಿ ಮಾಯನ್ನವರ ಎರಡು ಏಕರೆ ಕಬ್ಬಿನ ಗದ್ದೆಯಲ್ಲಿ ರಾಂಪುರ ಜನರು ಬಳಸಿದ ನೀರು ಚರಂಡಿಗೆ ಅಡ್ಡಲಾಗಿ ಉದ್ದಿಮೆಗಳು ಕಲ್ಲು ಮಣ್ಣು ಹಾಕಿ ಬಂದ್ ಮಾಡಿದ್ದರು. ಆದ್ದರಿಂದ ನೀರು ಹರಿದು ಹೋಗದೇ ಗದ್ದೆಯೊಳಗೆ ನಿಲ್ಲುತ್ತಿತ್ತು, ತೊಂದರೆಯಾಗಿದೆ ಎಂದು ಹಲವು ಬಾರಿ ರೈತ ಮೌಕಿಕವಾಗಿ ನಗರಸಭೆಗೆ ಬೆಟ್ಟಿ ನೀಡಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆಗ ತಮಗಾದ ತೊಂದರೆಯನ್ನು ಪತ್ರಿಕೆ ಎದಿರು ಅಳಲು ತೋಡಿಕೊಂಡರು.

ಈ ಕುರಿತು ಏ.4 ರಂದು ಉದಯವಾಣಿ ಪತ್ರಿಕೆ ರೈತನ ಹೊಲಕ್ಕೆ ನುಗ್ಗಿದ ಚರಂಡಿ ನೀರು ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು. ಕೂಡಲೇ ಲೋಕಪಯೋಗಿ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಈ ಮೊದಲು ಚರಂಡಿ ನೀರು ಹರಿದು ಹೋಗುವ ಸ್ಥಳದಲ್ಲಿಯೇ ಜೆಸಿಬಿಯಿಂದ ಕಾಲುವೆ ನಿರ್ಮಿಸಿ ನೀರು ಸರಾಗವಾಗಿ ಹೋಗುವಂತೆ ಕ್ರಮ ಜರುಗಿಸಿದ್ದಾರೆ. ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಲೋಕೋಪಯೋಗಿ ಇಲಾಖೆ ಎಇಇ ಶಂಕರ ಬಂಡಿವಡ್ಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next