Advertisement
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಾಮಚಂದ್ರಗೌಡರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಗರದಲ್ಲಿ 1,350 ದಶಲಕ್ಷ ಲೀ. ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ 400 ದಶಲಕ್ಷ ಲೀಟರ್ ನೀರು ಸೇರಿ ನಿತ್ಯ 1,750 ದಶಲಕ್ಷ ಲೀಟರ್ ಬಳಕೆಯಾಗುತ್ತಿದೆ. ಇದರಲ್ಲಿ ಶೇ.20ರಷ್ಟು ನೀರು ಮಾತ್ರ ಬಳಕೆಯಾಗಿ ಉಳಿದಿದ್ದು ಕೊಳಚೆ ನೀರಾಗಿ ಚರಂಡಿ ಸೇರುತ್ತಿದೆ. ಇಷ್ಟೂ ನೀರಿನ ಸಂಸ್ಕರಣೆಗೆ ಪೂರಕ ವ್ಯವಸ್ಥೆ 2020ಕ್ಕೆ ಸಿದ್ಧವಾಗಲಿದೆ ಎಂದು ಹೇಳಿದರು.
Related Articles
Advertisement
ಬೆಳ್ಳಂದೂರು ಕೆರೆ ಸಮಸ್ಯೆ : ಇದಕ್ಕೆ ಉತ್ತರಿಸಿದ ಸಚಿವ ಜಾರ್ಜ್, ಬೆಳ್ಳಂದೂರು ಕೆರೆ ಅಭಿವೃದ್ಗೆ ತಜ್ಞರು ಎರಡು ಹಂತದ ಯೋಜನೆ ರೂಪಿಸಿದ್ದು, ಅದರಂತೆ ಮೊದಲ ಹಂತ ಯೋಜನೆಗೆ 15 ದಿನದಲ್ಲಿ ಟೆಂಡರ್ ಅಂತಿಮವಾಗಲಿದೆ ಎಂದು ತಿಳಿಸಿದರು. ಬೆಳ್ಳಂದೂರು ಕೆರೆಗೆ ಡಿಟರ್ಜೆಂಟ್ ಸೇರಿ ಇತರೆ ನೊರೆಕಾರಕ ಅಂಶಗಳು ಹರಿದು ಬರುವುದರಿಂದ ನೊರೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಈಗಾಗಲೇ ತಜ್ಞರು ಎರಡು ಹಂತದಲ್ಲಿ ಕೆರೆ ಅಭಿವೃದ್ಗೆ ಯೋಜನೆ ರೂಪಿಸಿದ್ದಾರೆ. ಮೊದಲಿಗೆ ಕಳೆ ಸಸಿ ತೆರವು ಹಾಗೂ ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು. ಮೊದಲ ಹಂತದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 15 ದಿನದಲ್ಲಿ ಅಂತಿಮವಾಗಲಿದೆ. ಕೊಳಚೆ ನೀರನ್ನು ಜೌಗು ಪ್ರದೇಶದ ಮೂಲಕವೇ ಹರಿಸಿ ನೈಸರ್ಗಿಕವಾಗಿ ಸಂಸ್ಕರಿಸಲಾಗುವುದು ಎಂದು ತಿಳಿಸಿದರು.
ಕೆರೆಗೆ ಎರಡು ಕೋಡಿ ಸ್ಥಳವಿದ್ದು, ನೀರು ಎತ್ತರದ ಸ್ಥಳದಿಂದ ಧುಮುಕುವುದರಿಂದ ನೊರೆ ಹೆಚ್ಚಾಗುತ್ತಿದೆ. ಈಗಾಗಲೇ ಒಂದು ಕೋಡಿ ಬಳಿ ನೀರು ಇಳಿಜಾರಿನಲ್ಲಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೊಂದೆಡೆಯೂ ಸದ್ಯದಲ್ಲೇ ಇಳಿಜಾರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಪಿಂಕ್ ಪೊಲೀಸ್ ಪೆಟ್ರೋಲಿಂಗ್’ ವ್ಯವಸ್ಥೆವಿಧಾನಪರಿಷತ್ತು: ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಕೇರಳ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ “ಪಿಂಕ್ ಪೊಲೀಸ್ ಪೆಟ್ರೋಲಿಂಗ್’ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ತಾರಾ ಅನುರಾಧ ಹಾಗೂ ಕಾಂಗ್ರೆಸ್‌ನ ಡಾ. ಜಯಮಾಲಾ ರಾಮಚಂದ್ರ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಅವರು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಪಿಂಕ್ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಈಗಾಗಲೇ ನಗರದಲ್ಲಿ ಸ್ಥಳಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ 51 ಪಿಂಕ್ ಹೊಯ್ಸಳ ಸೇವೆ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಪಿಂಕ್ ಹೊಯ್ಸಳ ವಾಹನದಲ್ಲಿ ಒಬ್ಬ ಮಹಿಳಾ ಪೊಲೀಸ್ ಅಕಾರಿ ಅಥವಾ ಸಿಬ್ಬಂದಿ ಸೇರಿ 3 ಜನ ಪೊಲೀಸ್ ಸಿಬ್ಬಂದಿಗಳಿರುತ್ತಾರೆ. ಮಹಿಳೆಯರು ಈ ಅನುಕೂಲ ಪಡೆದುಕೊಳ್ಳಲು ಸಹಾಯವಾಗುವಂತೆ ಪ್ರಚಾರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.