Advertisement

ಚರಂಡಿ ಅವ್ಯವಸ್ಥೆ: ಸಚ್ಚೇರಿಪೇಟೆಯಲ್ಲಿ ಕೃತಕ ನೆರೆ

10:34 PM Jul 13, 2019 | sudhir |

ಬೆಳ್ಮಣ್‌: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಶುಕ್ರವಾರ ಸುರಿದ ಭಾರೀ ಮಳೆಗೆ ಸಚ್ಚೇರಿಪೇಟೆಯಲ್ಲಿ ಕೃತಕ ನೆರೆ ಉಂಟಾಗುವ ಮೂಲಕ ಜನರಿಗೆ ತೊಂದರೆಯಾಗಿದ್ದು, ಸ್ಥಳೀಯಾಡಳಿತದ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

Advertisement

ಇಲ್ಲಿನ ಚರಂಡಿಯ ಅವ್ಯವಸ್ಥೆಯ ಬಗ್ಗೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯತ್‌ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿರಲಿಲ್ಲ. ಚರಂಡಿ ವ್ಯವಸ್ಥೆ ಸರಿಪಡಿಸದಿದ್ದರೆ ಮಳೆಗಾಲಕ್ಕೆ ಕೃತಕ ನೆರೆಯಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಇದ್ದರೂ ಪಂಚಾಯತ್‌ ಆಡಳಿತ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇಲ್ಲಿನ ವಾಣಿಜ್ಯ ಸಂಕೀರ್ಣವೊಂದರ ಮಾಲಕರು ಎರಡು ವರ್ಷಗಳ ಹಿಂದೆ ಚರಂಡಿಯಲ್ಲಿ ಕೆಸರು ತುಂಬಿಕೊಂಡು, ಸೊಳ್ಳೆಗಳು ಅ ಧಿಕವಾಗಿರುವುದನ್ನು ಮನಗಂಡು ತಮ್ಮ ಸ್ವಂತ ಖರ್ಚಿನಲ್ಲಿ ಮೋರಿ ನಿರ್ಮಿಸಿ ಚಪ್ಪಡಿ ಕಲ್ಲು ಹಾಕಿಸಿದ್ದರು. ಅದಕ್ಕಿಂತ ಮುಂದುವರಿದ ಚರಂಡಿ ವ್ಯವಸ್ಥೆಯನ್ನು ಪಂಚಾಯತ್‌ ನಿರ್ಮಿಸಬೇಕಾಗಿದ್ದರೂª ಕೈಕಟ್ಟಿ ಕುಳಿತಿರುವುದು ವಿಪರ್ಯಾಸ ಎಂಬುದು ಸಾರ್ವಜನಿಕರ ದೂರು.

Advertisement

Udayavani is now on Telegram. Click here to join our channel and stay updated with the latest news.

Next