ಸಂಕಷ್ಟಕ್ಕೆ ಒಳಗಾದರು.
Advertisement
ನಗರದಲ್ಲಿ ಆನಂದ ಹೋಟೆಲ್ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಿಲ್ಲಾ ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಹಾಗೂ ಶ್ರೀ ಶರಣಬಸವೇಶ್ವರ ಕಾಲೇಜು, ಸಾರ್ವಜನಿಕ ಉದ್ಯಾನವನ,ನೂತನ ವಿದ್ಯಾಲಯ ಮುಂತಾದ ಶಾಲೆ, ಕಾಲೇಜುಗಳು, ಕಚೇರಿಗಳು ಇದ್ದುದರಿಂದ ಕೊಳಚೆ ಪ್ರವಾಹದಲ್ಲಿಯೇ
ಜನರು, ವಿದ್ಯಾರ್ಥಿಗಳು, ವರ್ತಕರು ಹಾಗೂ ಸಾರ್ವಜನಿಕರು ಸಂಚರಿಸುವಂತಾಗಿತ್ತು. ನಗರ ಸಾರಿಗೆ ಬಸ್‌ಗಳು, ಆಟೋಗಳು ಕೊಳಚೆ ಹರಿಯುವ ಪ್ರವಾಹದಲ್ಲಿಯೇ ನಿಲುಗಡೆ ಆಗಿದ್ದರಿಂದ ಕೆಟ್ಟ ವಾಸನೆಯಿಂದಾಗಿ ಪ್ರಯಾಣಿಕರು ಕೆಲ
ಹೊತ್ತಿನವರಿಗೆ ಪರದಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ ಅವರ ನಿವಾಸದ ಬಲಬದಿಯ ಮೂಲೆಯಲ್ಲಿಯೇ ಒಳಚರಂಡಿ ಒಡೆದು, ಅದರ ಕೊಳಚೆ ನೀರು ಕಾರಂಜಿಯಂತೆ ಚಿಮ್ಮಿ ಆನಂದ ಹೊಟೇಲ್ ಮಾರ್ಗವನ್ನು ಪ್ರವಾಹಪೀಡಿತವನ್ನಾಗಿ ಮಾಡಿತು. ಸುದ್ದಿ ತಿಳಿದು ಸುಮಾರು ಒಂದು ತಾಸಿನ ನಂತರ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒಳಚರಂಡಿ ದುರಸ್ತಿಗೊಳಿಸಿದರು.