Advertisement
ಸಣ್ಣಗೆ ಸುರಿಯುವ ಮಂಜು ವಾತಾವರಣದ ಉಷ್ಣತೆಯನ್ನು ಕೊಂಚ ಕಡಿಮೆ ಮಾಡಿದೆಯಾದರೂ, ಆ ತಣ್ಣನೆಯ ವಾತಾವರಣದ ಅನುಭವ ಪಡೆದುಕೊಳ್ಳಲು ಬಯಸುವ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದ ಸಂಭವವಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಉಂಟಾಗಬಹು ದಾದ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಏನೆಲ್ಲಾ ಮುಂಜಾಗ್ರತಾ ಕ್ರಮ ವಹಿಸಬೇಕು? ಈ ಬಗ್ಗೆ ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ತಮ್ಮದೇ ಆದ ಸಲಹೆಗಳನ್ನು ನೀಡಿದ್ದಾರೆ.
Related Articles
Advertisement
ಮಾಶ್ಚರೈಸರ್ ಸೂಕ್ತ: ಇನ್ನು ಚಳಿಗಾಲದಲ್ಲಿ ಶುಷ್ಕ ತೊಚೆಯನ್ನು ಕಾಯ್ದುಕೊಳ್ಳುವುದು ಸವಾಲೇ ಸರಿ. “ಚಳಿಗಾಲದಲ್ಲಿ ವಾತಾವರಣದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಚರ್ಮದ ತೇವಾಂಶವೂ ಕಡಿಮೆಯಾಗುತ್ತದೆ. ಚರ್ಮದಲ್ಲಿ ಬಿರುಕುಗಳು ಕಂಡುಬರುತ್ತವೆ. ನಿರ್ಲಕ್ಷ್ಯ ಮಾಡಿದರೆ ಉರಿ, ನವೆ, ರಕ್ತ ಸೋರಿಕೆಯೂ ಪ್ರಾರಂಭವಾಗಬಹುದು. ಆದ್ದರಿಂದ ಮೃದುವಾದ ಸಾಬೂನುಗಳು ಮತ್ತು ಮಾಶ್ಚರೈಸರ್ ಬಳಕೆ ಸೂಕ್ತ’ ಎಂದು ವಾಸವಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಬಿ.ಆರ್. ವೆಂಕಟೇಶ್ ಹೇಳುತ್ತಾರೆ.
ಮಕ್ಕಳ ಬಗ್ಗೆ ತೀವ್ರ ಎಚ್ಚರ: ಮಾರತ್‌ಹಳ್ಳಿಯ ರೈನ್‌ಬೋ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಚರ್ಮರೋಗ ತಜ್ಞೆ ಡಾ.ರಶ್ಮಿ, ಚಳಿಗಾಲದಲ್ಲಿ ಪೋಷಕರು ಮಕ್ಕಳ ಕುರಿತು ಅತ್ಯಂತ ಎಚ್ಚರ ವಹಿಸಬೇಕು. ಮಕ್ಕಳು ಮಣ್ಣು, ಧೂಳಿನಲ್ಲಿ ಆಡದಂತೆ, ತೀವ್ರ ಚಳಿಯಲ್ಲಿ ಹೊರಗಡೆ ಹೋಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೊರಗೆ ಹೋಗುವುದಾದರೆ ಮಕ್ಕಳಿಗೆ ಬೆಚ್ಚನೆಯ ಉಡುಪು ಧರಿಸಿ ಕರೆದೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.
ನೋವು ನಿರ್ಲಕ್ಷಿಸಬೇಡಿ: ವಾತಾವರಣ ಬದಲಾವಣೆಯಿಂದ ಮಕ್ಕಳಿಗೆ ಉಸಿರಾಟದ ಸೋಂಕುಗಳು ಉಂಟಾಗಿ ಜ್ವರ, ನೆಗಡಿ ಮತ್ತು ಕೆಮ್ಮು ಬರುವ ಸಾಧ್ಯತೆ ಇದೆ. ಮಕ್ಕಳಲ್ಲಿ ಅತಿಸಾರ ಮತ್ತು ವಾಂತಿ ಕೂಡಾ ಉಂಟಾಗಬಹುದು. ಮಗುವಿಗೆ ಜ್ವರ ಬಂದರೆ ಪ್ಯಾರಾಸಿಟಮಾಲ್‌ನಂತಹ ಔಷಧಗಳನ್ನು ನೀಡಿ ನಂತರ ಮಕ್ಕಳ ವೈದ್ಯರ ಸಲಹೆ ಪಡೆಯಬೇಕು. ಉಸಿರಾಟದ ತೊಂದರೆ, ಕೀಲುನೋವುಗಳನ್ನು ನಿರ್ಲಕ್ಷಿಸಬಾರದು ಎನ್ನುತ್ತಾರೆ ರೈನ್‌ಬೋ ಆಸ್ಪತ್ರೆಯ ಮತ್ತೂಬ್ಬ ವೈದ್ಯ ಡಾ.ಪ್ರತಾಪ್ ಚಂದ್ರ.
ಐಸ್‌ಕ್ರೀಮ್, ಜಂಕ್‌ಫುಡ್ ಬೇಡ: ಪೀಪಲ್ ಟ್ರೀ ಹಾಸ್ಪಿಟಲ್ಸ್‌ನ ಮಕ್ಕಳ ತಜ್ಞ ಡಾ. ಹರೀಶ್‌ಕುಮಾರ್ ಪ್ರಕಾರ, “ಚಳಿಗಾಲ ಆರಂಭವಾ ದಾಗಿನಿಂದ ನಮ್ಮ ಆಸ್ಪತ್ರೆಗೆ ಜ್ವರದ ಕಾರಣಕ್ಕಾಗಿ 20ಕ್ಕೂ ಹೆಚ್ಚು ಮಕ್ಕಳನ್ನು ಪೋಷಕರು ಚಿಕಿತ್ಸೆಗೆ ಕರೆತಂದಿದ್ದಾರೆ. ಹಾಗಾಗಿ ಜ್ವರದಿಂದ ಮಕ್ಕಳನ್ನು ದೂರವಿಡಲು ಚಳಿಗಾಲದಲ್ಲಿ ಐಸ್ಕ್ರೀಮ್, ಜಂಕ್ ಫುಡ್‌ಗಳಿಂದ ದೂರವಿಡಬೇಕು.
ಈ ಅಂಶಗಳನ್ನು ಗಮನಿಸಿ* ಬೆಚ್ಚನೆಯ ಉಡುಪುಗಳನ್ನು ಧರಿಸಿ
* ಆದಧಿಷ್ಟು ಬಿಸಿನೀರನ್ನು ಕುಡಿಯಿರಿ
* ತಂಗಳು ಆಹಾರವನ್ನು ತಿನ್ನಧಿಬೇಧಿಡಿ
* ತರಕಾರಿ ಚೆನ್ನಾಗಿ ತೊಳೆದು ಬೇಯಿಸಿ
* ಬೀದಿ ಬದಿ ಆಹಾರದಿಂದ ದೂರವಿರಿ
* ದೈನಂದಿನ ವ್ಯಾಯಾಮ ಬಿಡಬೇಡಿ
* ಮಾಯಿಶ್ಚರೈಸರ್‌ಗಳನ್ನು ಬಳಸಿ