Advertisement

ಚುನಾವಣಾ ಸುಧಾರಣೆಗೆ ಹಲವು ಕ್ರಮ

01:34 PM Apr 11, 2019 | keerthan |

ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹಲವು ಸುಧಾರಣೆಗಳ ಕ್ರಮಗಳನ್ನು
ಕೈಗೊಂಡಿದೆ. ವಿಶೇಷವಾಗಿ ಅಂಗವಿಕಲ ಸಿಬ್ಬಂದಿ ಮತಗಟ್ಟೆ ಸ್ಥಾಪನೆಗೆ ಮುಂದಾಗಿದೆ. ಇವರಿಗೆ ಯಾವುದೇ ಸಮಸ್ಯೆಗಳಾಗದಂತೆ ಅಗತ್ಯ ಕ್ರಮ
ಕೈಗೊಂಡಿದೆ.

Advertisement

ಬೆಂ.ಗ್ರಾ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 300 ಮತಗಟ್ಟೆಗಳಿದೆ. ಒಂದು ಮಾದರಿ ಮತಗಟ್ಟೆ ಮತ್ತು 2 ಸಖೀ (ಮಹಿಳಾ ಸಿಬ್ಬಂದಿ) ಮತಗಟ್ಟೆ ಹಾಗೂ ವಿಶೇಷವಾಗಿ ಅಂಗವಿಕಲ ಸಿಬ್ಬಂದಿ ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಮತದಾನ ಮಾಡುವಂತೆ ಜಾಗೃತಿ: ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆಯೂ ಜಾಗೃತಿ ಮೂಡಿಸಲಾಗಿದೆ. ಅದರಲ್ಲೂ ಈ ಬಾರಿ ವಿಶೇಷವಾಗಿಅಂಗವಿಕಲರ ಮತಗಟ್ಟೆ ಸ್ಥಾಪನೆ ಮಾಡಿರುವುದು ಜನರಲ್ಲಿ ಮತದಾನಕ್ಕೆ ಪ್ರೇರಣೆ ನೀಡಿದೆ. ಇಲ್ಲಿ ಎಲ್ಲರೂ ಅಂಗವಿಕಲ ಸಿಬ್ಬಂದಿಗಳೇ ಇರುತ್ತಾರೆ. ಮಾಗಡಿ ತಾಲೂಕಿನ ಮಂಚನಬೆಲೆಯ ಅವ್ವೆರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ 169ನೇ ಮತಗಟ್ಟೆ ಕೇಂದ್ರದಲ್ಲಿ ಅಂಗವಿಕಲ ಸಿಬ್ಬಂದಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಈ ಮತಗಟ್ಟೆಯಲ್ಲಿ ಕೇವಲ 136 ಮತದಾರರಿದ್ದಾರೆ. ಕಡಿಮೆ ಮತದಾರರು ಇರುವ ಕೇಂದ್ರ ಇದಾಗಿದೆ.

ಮಾದರಿ ಬ್ಯಾಲೆಟ್‌ ಪೇಪರ್‌: ಈ ಬಾರಿ ಅಂಗವಿಕಲರ ಮತಗಟ್ಟೆ ಕೇಂದ್ರಗಳೊಂದಿಗೆ ಚುನಾವಣಾ ಆಯೋಗ ಮಾದರಿ ಬ್ಯಾಲೆಟ್‌ ಪೇಪರ್‌ ಮತಗಟ್ಟೆ ಕೆಂದ್ರದಲ್ಲಿ ಸ್ಥಾಪನೆ ಮಾಡಲಿದೆ. ಮತದಾನ ಮಾಡಲು ಮುಂದಾಗವ ದೃಷ್ಟಿ ಹೀನರ ಅನುಕೂಲಕ್ಕಾಗಿ ಈ ಕ್ರಮವನ್ನು ಕೈ ಗೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲಿಯೂ ಮಾದರಿ ಬ್ಯಾಲೆಟ್‌ ಪೇಪರ್‌ ಸ್ಥಾಪನೆ ಮಾಡಲಾಗಿದೆ. ಮತದಾನದ ಮುಂಚಿಯೇ ದೃಷ್ಟಿ ಹೀನರಿಗೆ ಇದನ್ನು
ಒದಗಿಸಲಾಗುವುದು. ಇದರಲ್ಲಿನ ಮಾಹಿತಿ ಆಧಾರದ ಮೇಲೆಯೇ ಯಾರ ಸಹಾಯವೂ ಇಲ್ಲದೇ ಮತದಾನ ಮಾಡಬಹುದು. ಬ್ಯಾಲೆಟ್‌
ಪೇಪರ್‌ನಲ್ಲೊ ಬ್ರೈನ್‌ ಲಿಪಿ ಅಳವಡಿಲಾಗಿದ್ದು, ಚುನಾವಣಾ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಗಳ ಹೆಸರು, ಪಕ್ಷದ ಹೆಸರನ್ನು ನಮೂದಿಸಲಾಗಿದೆ. ಇದರ ಆಧಾರದ ಮೇಲೆ ಮತದಾನ ಮಾಡುವ ಅವಕಾಶ ಕಲ್ಪಿಸಿದೆ.

ವಿಶೇಷ ಮತಗಟ್ಟೆಗಳ ಸ್ಥಾಪನೆ: ಅಂಗವಿಕಲ ಸಿಬ್ಬಂದಿಗೆ ಅವ್ವೆರಹಳ್ಳಿ 169ನೇ ಮತಗಟ್ಟೆ ಕೇಂದ್ರ ಮತ್ತು 126ನೇ ಮತಗಟ್ಟೆ ಕೇಂದ್ರವನ್ನು ಮಾದರಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಪುರಸಭೆ ಕಚೇರಿಯ 135 ಮತಗಟ್ಟೆ ಮತ್ತು ಕುದೂರಿನ 34ನೇ ಮತಗಟ್ಟೆ ಸಖೀ ಮತಗಟ್ಟೆಗಳಾಗಿವೆ.

Advertisement

ವಿವಿ ಪ್ಯಾಟ್‌ ಪರಿಶೀಲನೆ: ಎಲ್ಲೂ ಸಮಸ್ಯೆ ಬಾರದಂತೆ ಒಟ್ಟು 336 ವಿವಿ ಪ್ಯಾಟ್‌ಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಇದರಲ್ಲಿ 26 ವಿವಿಪಿ ಮತ್ತು 8 ಸಿಇಒ ಹಾಗೂ 7 ಬಿಒ ಕೆಟ್ಟಿವೆ. ಅವುಗಳ ಮಾಹಿತಿಯನ್ನು ಆರ್‌ಒಗೆ ನೀಡಲಾಗಿದೆ. ಶೀಘ್ರದಲ್ಲಿಯೇ ಒದಗಿಸಲಿದ್ದಾರೆ. 10 ಹೆಚ್ಚುವರಿಯಾಗಿ ತರಿಸಿಕೊಳ್ಳಲಾಗಿದ್ದು, ಇಡಿಸಿ ಮತ್ತು ಪೋಸ್ಟ್‌ ಬ್ಯಾಲೆಟ್‌ ಅರ್ಜಿ ವಿತರಣೆ ಏ.11 ಕೊನೆ ದಿನವಾಗಿದೆ.

ವಿತರಣೆಗೆ ಅವಕಾಶ: ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ನಾಯಕರು ಹಾಗೂ ಅಭ್ಯರ್ಥಿಗಳು ನಡೆಸುವ ಪ್ರಚಾರ ಸಭೆ ಅಥವಾ ರ್ಯಾಲಿಗಳಲ್ಲಿ ಸಾರ್ವಜನಿಕರಿಗೆ ನೀರು, ಮಜ್ಜಿಗೆ ವಿತರಣೆ ಮಾಡಬಹುದು. ಕಾμ, ಜೂಸ್‌, ಇನ್ನಿತರೆ ತಿನಿಸುಗಳನ್ನು ನೀಡುವಂತಿಲ್ಲ. ತಿನಿಸುಗಳು ನೀಡುತ್ತಿರುವುದು ಕಂಡು ಬಂದರೆ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ನಾಯಕರು, ಅಭ್ಯರ್ಥಿ ಪಕ್ಷಕ್ಕೆ ಸಂಬಂಧಿಸಿದವರು ಪ್ರಚಾರ ಸಭೆಗೆ ಭಾಗವಹಿಸುವವರು ಕಡ್ಡಾಯವಾಗಿ ವಾಹನಗಳಿಗೆ ಆರ್‌ಒಯಿಂದಲೇ ಅನುಮತಿ ಪಡೆದಿರಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಸೂರಜ್‌ ತಿಳಿಸಿದ್ದಾರೆ.

ಟಿ ಶರ್ಟ್‌, ಸೀರೆ ವಿತರಣೆ ಕಾನೂನು ಉಲ್ಲಂಘನೆ: ಮೈತ್ರಿ ಅಭ್ಯರ್ಥಿ ಎರಡು ಪಕ್ಷದ ಬಾವುಟ ಬಳಸಬಹುದು. ಬಿಜೆಪಿ ತಮ್ಮ ಪಕ್ಷದ ಒಂದೇ ಬಾವುಟ ಮಾತ್ರ ಬಳಸಬೇಕಿದೆ. ಟೋಪಿ, ಪಕ್ಷದ ಶಾಲು ಕೊಡಬಹುದು, ಟಿ ಶರ್ಟ್‌, ಸೀರೆ ವಿತರಣೆ
ಮಾಡುವಂತಿಲ್ಲ. ಧಾರ್ಮಿಕ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಪಕ್ಷದ ಅಭ್ಯರ್ಥಿಗಳು, ನಾಯಕರು ಸಾಮಾನ್ಯರಂತೆ ಭಾಗವಹಿಸಬಹುದು. ರಥಕ್ಕೆ ಚಾಲನೆ ಕೊಡುವಂತಿಲ್ಲ. ಸಾಮಾನ್ಯರಂತೆ ಭಕ್ತರೊಂದಿಗೆ ರಥ ಎಳೆಯಬಹುದು. ಆದರೆ, ಭಾಷಣ ಮಾಡುವುದು, ಹಾರ ಹಾಕಿಸಿಕೊಳ್ಳುವುದು
ಗಣ್ಯರಂತೆ ಬಿಂಬಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next