ವಾಷಿಂಗ್ಟನ್ : ಅಮೆರಿಕದ ವರ್ಜೀನಿಯಾದಲ್ಲಿರುವ ವಾಲ್‌ಮಾರ್ಟ್ ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದು ಕೆಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಂಗಳವಾರ ಈ ಘಟನೆ ನಡೆದಿದ್ದು ಬಂಧೂಕುಧಾರಿ ವ್ಯಕ್ತಿ ಹೆಚ್ಚಿನ ಜನ ಸೇರಿದ್ದ ವಾಲ್‌ಮಾರ್ಟ್ ಒಳಗೆ ಪ್ರವೇಶಿಸಿ ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದಾನೆ ಎಂದು ಚೆಸಾಪೀಕ್ ಪೊಲೀಸರು ದೃಢೀಕರಿಸಿದ್ದಾರೆ
ಘಟನೆಯ ಬಳಿಕ ಬಂದೂಕುಧಾರಿ ವ್ಯಕ್ತಿಯೂ ಸಾವನ್ನಪ್ಪಿರುವುದಾಗಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ 40 ಕ್ಕೂ ಹೆಚ್ಚು ತುರ್ತು ವಾಹನಗಳನ್ನು ರವಾನಿಸಿ, ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles