ಕಾಬೂಲ್ : ಪಂಜ್ ಶಿರ್ ನನ್ನು ನಿನ್ನೆ(ಶುಕ್ರವಾರ, ಸಪ್ಟೆಂಬರ್ 3) ವಶಪಡಿಸಿಕೊಂಡ ಬೆನ್ನಿಗೆ ತಾಲಿಬಾನ್ ಉಗ್ರ ಪಡೆ ಮನ ಬಂದಂತೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ ಕಾರಣದಿಂದಾಗಿ ಮಕ್ಕಳನ್ನೊಳಗೊಂಡು ಹಲವಾರು ಮಂದಿ ತೀವ್ರ ಗಾಯಗೊಂಡಿದ್ದಾರೆಂದು ಅಲ್ಲಿನ ಸ್ಥಳಿಯ ಸುದ್ದಿ ಸಂಸ್ಥೆ ಅಸ್ವಾಕ ವರದಿ ಮಾಡಿದೆ.
ಪಂಜ್ ಶಿರ್ ಕಣಿವೆಯನ್ನ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದರೊಂದಿಗೆ ಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎಸ್ ಆರ್ ಎಫ್ ಎ) ಸೋಲಿಸಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯ ನೆಪದಲ್ಲಿ ಕಾಬೂಲ್ ನ ಸುತ್ತ ಮುತ್ತ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನ್ ಹರ್ಷ ವ್ಯಕ್ತ ಪಡಿಸಿಕೊಂಡ ಪರಿಣಾಮ ನೂರಾರು ಮಂದಿ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ : ಕೋವಿಡ್ 19 : ಕಳೆದೊಂದು ದಿನದಲ್ಲಿ 42 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲು | 330 ಮಂದಿ ಬಲಿ
ಪಂಜ್ ಶಿರ್ ನನ್ನು ವಶಪಡಿಸಿಕೊಂಡಿದ್ದನ್ನು ಸ್ಪಷ್ಟಪಡಿಸಿದ ತಾಲಿಬಾನ್ ಉಗ್ರ ಪಡೆಯ ಕಮಾಂಡರ್ ವೊಬ್ಬ, ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ ಅಫ್ಗಾನಿಸ್ತಾನ ನಮ್ಮ ಪಾಲಾಗಿದೆ. ನಮ್ಮ ಆಡಳಿತಕ್ಕೆ ಅಡೆತಡೆಗಳಂತಿದ್ದ ಎಲ್ಲಾ ನಮ್ಮ ವಿರೋಧಿ ಸೈನ್ಯವನ್ನು ತಾಲಿಬಾನ್ ಸೋಲಿಸಿದೆ. ಈಗ ಸಂಪೂರ್ಣ ಅಫ್ಗಾನಿಸ್ತಾನ ತಾಲಿಬಾನ್ ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡಿರುವುದನ್ನು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇನ್ನು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗೂ ಮುನ್ನವೇ ತಾಲಿಬಾನ್ ಉಗ್ರ ಸಂಘಟನೆಯೆ ನಿದ್ದೆ ಗೆಡಿಸಿದ ಪಂಜ್ ಶೀರ್ ಕಣಿವೆಯನ್ನು ಉಗ್ರ ಪಡೆ ತನ್ನ ವಶಕ್ಕೆ ಪಡೆದುಕೊಂಡಿರುವು. ತಾಲಿಬಾನ್ ಭಯೋತ್ಪಾದಕರಿಗೆ ಆನೆ ಬಲ ಬಂದಂತಾಗಿದೆ. ಆದರೇ, ಈವರೆಗೆ ಪಂಜ್ ಶೀರ್ ನ ಮುಖಂಡರು ಸೋಲನ್ನು ಒಪ್ಪಿಕೊಂಡಿಲ್ಲ ಎಂಬುದಾಗಿ ವರದಿಯಾಗಿದೆ.
ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ, ಪಂಜಾಬ್ ನಲ್ಲಿ ಆಪ್ ಅಧಿಕಾರಕ್ಕೆ: ಸಮೀಕ್ಷೆ